ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಂಪಂಗಿ ವಿರುದ್ಧ ಕ್ರಮ ಸ್ಪೀಕರ್‌‌ಗೆ ಬಿಟ್ಟ ವಿಚಾರ: ಸಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಂಪಂಗಿ ವಿರುದ್ಧ ಕ್ರಮ ಸ್ಪೀಕರ್‌‌ಗೆ ಬಿಟ್ಟ ವಿಚಾರ: ಸಿಎಂ
ಲಂಚ ಸ್ವೀಕರಿಸುತ್ತಿರುವ ವೇಳೆಯಲ್ಲಿ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿರುವ ಶಾಸಕ ವೈ.ಸಂಪಂಗಿ ಬಗ್ಗೆ ಮುಂದಿನ ಕ್ರಮದ ವಿಚಾರ ಲೋಕಾಯುಕ್ತ ಹಾಗೂ ಸ್ಪೀಕರ್ ಅವರಿಗೆ ಬಿಟ್ಟ ವಿಷಯವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಕೆಜಿಎಫ್ ಶಾಸಕ ಸಂಪಂಗಿ ಎಸಗಿದ ಕೃತ್ಯದಿಂದ ತುಂಬಾ ನೋವಾಗಿದೆ. ಸಂಪಂಗಿಯನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಈಗಾಗಲೇ ಅಮಾನತು ಮಾಡಲಾಗಿದೆ. ಮುಂದಿನ ಕ್ರಮ ಏನಿದ್ದರೂ ಸ್ಪೀಕರ್ ಹಾಗೂ ಲೋಕಾಯುಕ್ತ ಕೈಗೊಳ್ಳಬೇಕು ಎಂದರು. ಸಂಪಂಗಿಯನ್ನು ಶಾಸಕತ್ವದಿಂದ ವಜಾಗೊಳಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.

ಅಲ್ಲದೇ ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂಬ ಬೇಡಿಕೆಯ ಕುರಿತು ಸಂಪುಟದಲ್ಲಿ ನಿರ್ಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರವೇ ಬಸ್ ಪ್ರಯಾಣ ದರ ಇಳಿಕೆ: ಅಶೋಕ್
ಕೋರ್ಟ್‌ಗೆ ಸಂಪಂಗಿ ಗೈರು:ನ್ಯಾಯಾಧೀಶರು ಅಸಮಾಧಾನ
ಕೈಕಂಬ ಎನ್‌ಕೌಂಟರ್: ಪರಾರಿಯಾದವರೆಷ್ಟು ಮಂದಿ?
ಲಂಚ-ಕೇಸ್ ವಾಪಸ್ ಪಡೆಯಿರಿ: ಫಾರೂಕ್‌‌ಗೆ ಜೀವ ಬೆದರಿಕೆ
ಬಿಜೆಪಿ ಹಣ ಮಾಡಲು ಹೊರಟಿದೆ: ಕುಮಾರಸ್ವಾಮಿ
ಪಬ್ ದಾಳಿ-ಪಿತೂರಿಗಾರರ ಹೆಸರು ಶೀಘ್ರವೇ ಬಹಿರಂಗ: ಆಚಾರ್ಯ