ಕೊಡಗು ಜಿಲ್ಲಾ ಬಂಧೀಖಾನೆಯ ಸುಪರಿಟೆಂಡ್‌ಡೆಂಟ್ ಆಗಿ ಪ್ರಥಮ ಬಾರಿಗೆ ಮಹಿಳೆಯೊಬ್ಬರು ನಿಯೋಜಿತರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಡಿಎಸ್ ಪದವೀಧರೆಯಾಗಿರುವ ಅನಿತಾ ಅವರು ಕೊಡಗಿನ ಜೈಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಅವರು ಜ.23ರಂದು ಅಧಿಕಾರ ಸ್ವೀಕರಿಸಿ, ರಜೆ ಮೇಲೆ ತೆರಳಿದ್ದಾರೆ. ಈ ಮೊದಲು ಮೈಸೂರಿನ ಕಾರಗೃಹದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇದೀಗ ಪ್ರೊಬೇಷನರಿಯಾಗಿ ಮಡಿಕೇರಿಯಾಗಿ ವರ್ಗಾವಣೆಗೊಂಡಿರುವುದಾಗಿ ಯುಎನ್‌ಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಇದೊಂದು ಸವಾಲಿನ ಕೆಲಸವಾಗಿದ್ದು, ತಾನು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿರುವ ಅನಿತಾ, ಮಡಿಕೇರಿಯಿಂದ ಆರು ಕಿ.ಮೀ.ದೂರದಲ್ಲಿರುವ ಕಾರ್ನಾಗೇರಿಯಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡಕ್ಕೆ ಕೈದಿಗಳನ್ನು ಸ್ಥಳಾಂತರಿಸಲಾಗುವುದು. ಆ ನಿಟ್ಟಿನಲ್ಲಿ ನೂತನ ಕಟ್ಟಡ ಫೆಬ್ರುವರಿ 18ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೇಮಾರ್ ಅವರು ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು. |