ಹುತಾತ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿ ಸ್ಮರಣೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಸೀತಾರಾಂ ಅಯ್ಯಂಗಾರ್ (82) ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ಗಾಂಧಿ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದ ಅವರು, ಭಾವೋದ್ವೇಗಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದರು. ಈ ಕಾರ್ಯಕ್ರಮದ ನಂತರ ಗಾಂಧಿ ವೃತ್ತದಲ್ಲಿ ನಗರಪಾಲಿಕೆ ವತಿಯಿಂದ ಸ್ಥಾಪಿಸಲಾಗಿರುವ 10 ಅಡಿ ಎತ್ತರದ 700 ಕೆಜಿ ತೂಕದ ಮಹಾತ್ಮಗಾಂಧೀಜಿ ಅವರ ಕಂಚಿನ ಪ್ರತಿಮೆ ಅನಾವರಣಗೊಳಿಸಬೇಕಿತ್ತು.
ಸೀತಾರಾಂ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ. ಬೆಂಗಳೂರಿನಲ್ಲಿ ಸೈಕಾಲಜಿಸ್ಟ್ ಆಗಿರುವ ಸುದರ್ಶನ್, ಮೈಸೂರಿನ ಕೈಗಾರಿಕೋದ್ಯಮಿ ನಾರಾಯಣ ಪ್ರಸಾದ್, ಪುತ್ರಿಯರಾದ ಶಾಂತ ಬೆಂಗಳೂರು ಹಾಗೂ ಸುಮತಿ ಮೈಸೂರಿನಲ್ಲಿದ್ದಾರೆ. |