ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಮಾಜಿ ಕಪ್ತಾನ ಅನಿಲ್ ಕುಂಬ್ಳೆ ಅವರಿಗೆ ನಾವು ಯಾವುದೇ ಆಹ್ವಾನ ನೀಡಿಲ್ಲ ಎಂದು ಭಾರತೀಯ ಜನತಾ ಪಕ್ಷ ಶುಕ್ರವಾರ ಸ್ಪಷ್ಟಪಡಿಸಿದೆ.ತಾನು ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುತ್ತಿಲ್ಲ, ನಾನು ಚುನಾವಣೆಯಲ್ಲಿ ಬಿಜೆಪಿಯಿಂದ ಅಖಾಡಕ್ಕೆ ಇಳಿಯುತ್ತೇನೆ ಎಂಬು ಸುದ್ದಿಯೇ ಆಧಾರರಹಿತವಾದದ್ದು ಎಂದು ಕುಂಬ್ಳೆ ಅವರ ಆಪ್ತವಲಯ ಕೂಡ ಪ್ರತಿಕ್ರಿಯಿಸಿದೆ.ಕುಂಬ್ಳೆಯವರಿಗೆ ಬಿಜೆಪಿ ಟಿಕೆಟ್ ಇಲ್ಲ ಎಂದು ರಾಜ್ಯ ಬಿಜೆಪಿಯ ವಕ್ತಾರ ವಿ.ಧನಂಜಯ್ ಕುಮಾರ್ ಐಎಎನ್ಎಸ್ಗೆ ತಿಳಿಸಿದ್ದು, ಒಂದು ವೇಳೆ ಅವರು ಟಿಕೆಟ್ ಕೇಳಿದ್ದರೆ, ಅವರ ಹೆಸರನ್ನು ಬಿಜೆಪಿಯ ಸೆಂಟ್ರಲ್ ಕಮಿಟಿಗೆ ಶಿಫಾರಸು ಮಾಡಲಾಗುವುದು ಎಂದರು.ಮಾಜಿ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಅವರು ಭಾರತೀಯ ಜನತಾ ಪಕ್ಷದ ವತಿಯಿಂದ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಈ ಸ್ಪಷ್ಟನೆ ನೀಡಿದೆ. ಕುಂಬ್ಳೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಅಲ್ಲದೇ ಅವರು ಆಕಾಂಕ್ಷಿ ಕೂಡ ಅಲ್ಲ ಎಂದು ಕುಂಬ್ಳೆ ಆಪ್ತವಲಯ ಹೇಳಿದೆ. |