ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಅಯ್ಯೋ ನನಗೆ ತಲೆನೋವು '- ಸಂಪಂಗಿ ಪುರಾಣ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಅಯ್ಯೋ ನನಗೆ ತಲೆನೋವು '- ಸಂಪಂಗಿ ಪುರಾಣ!
ಹೃದಯ ಬೇನೆಯೂ ಇಲ್ಲ, ಏನೂ ಇಲ್ಲ-ವೈದ್ಯಾಧಿಕಾರಿ
ಲಂಚಾವತಾರದಿಂದ ಲೋಕಾಯುಕ್ತರಿಗೆ ಸೆರೆಸಿಕ್ಕಿರುವ ಕೆಜಿಎಫ್ ಶಾಸಕ ಸಂಪಂಗಿ ಶುಕ್ರವಾರ ಹೃದಯಬೇನೆ ಇದೆ ಎಂಬ ನೆಪದಿಂದ ಕೋರ್ಟ್‌ಗೆ ಗೈರು ಹಾಜರಾಗಿ ನ್ಯಾಯಾಧೀಶರ ಅಸಮಾಧಾನಕ್ಕೆ ಗುರಿಯಾಗಿದ್ದ ಬೆನ್ನಲ್ಲೇ ಇದೀಗ ಶನಿವಾರ ಕೂಡ ತನ್ನ ನಾಟಕ ಮುಂದುವರಿಸಿರುವ ಶಾಸಕ ತನಗೆ ತಲೆನೋವು, ಮೈಕೈನೋವು ಎಂಬ ಹೊಸರಾಗ ಹಾಡಲು ಆರಂಭಿಸಿದ್ದಾರೆ.

ಲಂಸ್ವೀಕರಿಸುತ್ತಿರುವ ಸಂದರ್ಭದಲ್ಲಿಯೇ ಲೋಕಾಯುಕ್ತರಿಗೆ ಸೆರೆಸಿಕ್ಕಿದ್ದ ಶಾಸಕ ವೈ.ಸಂಪಂಗಿಯನ್ನು ಗುರುವಾರ ರಾತ್ರಿಯೇ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶೆಟ್ಟರ್ ಅವರು ಸಂಪಂಗಿಯನ್ನು ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು.

ಆದರೆ ರಾತ್ರಿಯೇ ತನಗೆ ಎದೆನೋವು ಕಾಣಿಸಿಕೊಂಡಿದೆ ಎಂದು ಹೇಳಿ, ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಕೋರ್ಟ್‌ಗೆ ಗೈರು ಹಾಜರಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು ಸಂಪಂಗಿಯನ್ನು ಯಥಾಸ್ಥಿತಿಯಲ್ಲೇ ಹಾಜರುಪಡಿಸಲು ಆದೇಶ ನೀಡಿ, ಅಲ್ಲಿಯವರೆಗೆ ಬಂಧನ ಮುಂದುವರಿಯಲಿದೆ ಎಂದಿದ್ದರು.

ಸಂಪಂಗಿಗೆ ಹೃದಯಬೇನೆಯಾಗಲಿ ಯಾವುದೇ ತೆರನಾದ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿರುವ ಜಯದೇವ ಆಸ್ಪತ್ರೆಯ ಎಂ.ಡಿ. ಡಾ.ಮಂಜುನಾಥ್, ಶನಿವಾರ ಡಿಸ್‌ಚಾರ್ಜ್ ಮಾಡಿದ್ದರು. ಅಲ್ಲಿಂದ ಹೊರಬಂದ ಸಂಪಂಗಿ ಮತ್ತೊಂದು ನಾಟಕಕ್ಕೆ ಅಣಿಯಾಗಿದ್ದು, ತನಗೆ ವಿಪರೀತ ತಲೆನೋವು,ಮೈಕೈ ನೋವು ಇದೆ ಎಂದು ಸಬೂಬು ಹೇಳುತ್ತಿದ್ದು ನಿಮಾನ್ಸ್‌ಗೆ ದಾಖಲಾಗುವ ಸಾಧ್ಯತೆಗಳಿರುವುದಾಗಿ ಆಪ್ತ ಮೂಲಗಳು ತಿಳಿಸಿವೆ.

ನಿನ್ನೆ ಕೋರ್ಟ್‌ಗೆ ಗೈರು ಹಾಜರಾದ ಬಗ್ಗೆಯೇ ಕಿಡಿಕಾರಿರುವ ನ್ಯಾಯಾಧೀಶರು, ಇಂದು ಯಾವ ತೀರ್ಪು ನೀಡಲಿದ್ದಾರೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಡಿಯೂರಪ್ಪ ಪುತ್ರನನ್ನು ಕಣಕ್ಕಿಳಿಸಲು ವರಿಷ್ಠರ ಸಮ್ಮತಿ?
ಸ್ಪೀಕರ್ ಏನು ಮಾಡುತ್ತಾರೋ ನೋಡುವ: ಉಗ್ರಪ್ಪ
ಕುಂಬ್ಳೆಗೆ ಲೋಕಸಭೆ ಟಿಕೆಟ್ ಇಲ್ಲ: ಬಿಜೆಪಿ ಸ್ಪಷ್ಟನೆ
ಗಾಂಧಿ ಸ್ಮರಣೆಯಲ್ಲಿಯೇ ಕೊನೆಯುಸಿರೆಳೆದ ಗಾಂಧಿವಾದಿ
ಸಿದ್ದರಾಮಯ್ಯಗೆ ಸ್ಥಾನ-ದೇಶಪಾಂಡೆ ತಲೆದಂಡ?
ಸೇತುವೆ ಸಮೀಪ ಗಣಿಗಾರಿಕೆಗೆ ಹೈಕೋರ್ಟ್ ತಡೆ