ಗ್ರಾಮೀಣ ಪ್ರದೇಶಗಳಿಗೆ 24 ಗಂಟೆ ಸಿಂಗಲ್ ಫೇಸ್ ವಿದ್ಯುತ್ ನೀಡಲು 'ನಿರಂತರ ಗ್ರಾಮ ಜ್ಯೋತಿ' ಯೋಜನೆಯನ್ನು ರೂಪಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಇದಕ್ಕಾಗಿ 2,200 ಕೋಟಿ ರೂ. ನೀಡುವಂತೆ ಸರ್ಕಾರವನ್ನು ಒತ್ತಾಯಿಸಿರುವುದಾಗಿ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈಗ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಈ ಪ್ರಯೋಗ ನಡೆದಿದೆ. ಯೋಜನೆಯನ್ನು 18 ತಿಂಗಳಲ್ಲಿ ಕೈಗೊಂಡು ಪ್ರತಿ ತಾಲೂಕಿನಲ್ಲಿ 10 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿ ನಡೆಸಲಾಗುವುದು. ವಿದ್ಯುತ್ ಉಪಕರಣಗಳನ್ನು ಇಲಾಖೆಯೇ ಖರೀದಿಸಿ, ಕಾಮಗಾರಿಯನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಲಿದೆ. ಇದರಿಂದ ಗ್ರಾಮಗಳಲ್ಲಿ ವಿದ್ಯುತ್ ಕೊರತೆ ನಿವಾರಣೆಯಾಗಲಿದೆ ಎಂದು ಅವರು ಹೇಳಿದರು.
ಈಗ ನಗರ ಪ್ರದೇಶಗಳಿಗೆ ನಿರಂತರ ವಿದ್ಯುತ್, ಗ್ರಾಮ ಪ್ರದೇಶದಲ್ಲಿ ತಲಾ 6 ಗಂಟೆ ಮೂರು ಫೇಸ್ ಹಾಗೂ ಸಿಂಗಲ್ ಫೇಸ್ ವಿದ್ಯುತ್ ನೀಡುವುದನ್ನು ಮುಂದುವರಿಸಲಾಗುವುದು. ಪರೀಕ್ಷೆ ಕಾಲದಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗುವುದು. ಈಗ ಪ್ರತಿ ದಿನ 125 ದಶಲಕ್ಷ ಯೂನಿಟ್ ದಾಟಲಿದೆ ಎಂದರು.
ಒಂದು ಸಾವಿರ ಸಹಾಯಕ ಮತ್ತು ಜೂನಿಯರ್ ಎಂಜಿನಿಯರ್ ಹಾಗೂ 4 ಸಾವಿರ ಲೈನ್‌ಗಳನ್ನು 3 ತಿಂಗಳಲ್ಲಿ ನೇಮಿಸಲಾಗುವುದು. ಮೆರಿಟ್ ಆಧರಿಸಿ ಆಯ್ಕೆ ನಡೆಯಲಿದೆ ಎಂದು ಹೇಳಿದರು.
|