ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲೋಕಸಭೆಗೆ ಪುತ್ರನ ಸ್ಪರ್ಧೆ ಇಲ್ಲ: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆಗೆ ಪುತ್ರನ ಸ್ಪರ್ಧೆ ಇಲ್ಲ: ಯಡಿಯೂರಪ್ಪ
ತಮ್ಮ ಪುತ್ರ ರಾಘವೇಂದ್ರ ಅವರಿಗೆ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಮರುಪರಿಶೀಲನೆಯ ಪ್ರಶ್ನೆಯೇ ಇಲ್ಲ ಎಂದರು.

ಶನಿವಾರವಷ್ಟೇ ಪುತ್ರನ ಸ್ಪರ್ಧೆಗೆ ಒಲವು ವ್ಯಕ್ತಪಡಿಸಿ ಮಾತನಾಡಿದ್ದ ಮುಖ್ಯಮಂತ್ರಿ ಈಗ ಹಠಾತ್ ತಮ್ಮ ನಿಲುವನ್ನು ಬದಲಿಸಿದ್ದಾರೆ. ಈ ಕುರಿತು ಜಿಲ್ಲಾ ಘಟಕದ ಜೊತೆ ಮಾತನಾಡುತ್ತೇನೆ. ಈ ವಿಷಯದಲ್ಲಿ ಯಾವುದೇ ಗೊಂದಲ ಕೂಡಾ ಇಲ್ಲ. ರಾಘವೇಂದ್ರ ಸ್ಪರ್ಧಾ ಕಣದಲ್ಲಿ ಇಲ್ಲ. ಯಾರೇ ಅಭ್ಯರ್ಥಿಯಾದರೂ ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸುವ ಪೂರ್ಣ ಜವಾಬ್ದಾರಿಯನ್ನು ಎಲ್ಲರೂ ಹೋರಬೇಕು ಎಂದರು.

ಬೇರೆ ಕಡೆಗಳಲ್ಲಿ ಮುಖ್ಯಮಂತ್ರಿಗಳ ಮಕ್ಕಳು ಸ್ಪರ್ಧಿಸಿದ್ದಾರೆ ಎಂಬುದು ನಿಜ. ಬೇರೆ ಕಡೆಗೂ ನನಗೂ ವ್ಯತ್ಯಾಸವಿದೆ. ಈ ವಿಷಯದಲ್ಲಿ ಪಕ್ಷದ ಕಾರ್ಯಕರ್ತರು ಬೇಸರ ಮಾಡಿಕೊಳ್ಳಬಾರದು ಎಂದರು. ಪಕ್ಷಕ್ಕಾಗಿ ದುಡಿದ ಅನೇಕ ಹಿರಿಯರಿದ್ದಾರೆ. ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಲಾಗುತ್ತದೆ. ತಾವು ಮಾಡಿದ ಅಭಿವೃದ್ದಿ ಕಾರ್ಯವನ್ನು ಗುರುತಿಸಿ ಜನ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾನು ಲೋಕಸಭಾ ಚುನಾವಣಾ ಸ್ಪರ್ಧಾ ಕಣದಲ್ಲಿ ಇಲ್ಲ. ಈ ಬಗ್ಗೆ ತಂದೆಯವರ ಅಭಿಪ್ರಾಯವೇ ತನ್ನ ಅಭಿಪ್ರಾಯ ಎಂದು ಸಿಎಂ ಪುತ್ರ ಬಿ.ವೈ.ರಾಘವೇಂದ್ರ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಗುಂಬೆ: ನಕ್ಸಲ್ ಅಟ್ಟಹಾಸ-ಮನೆ, ಬೈಕ್‌ಗೆ ಬೆಂಕಿ
ಮಡಿಕೇರಿ: ಮುತಾಲಿಕ್‌ಗೆ ಜಾಮೀನು
ಸೋನಿಯಾ ಭೇಟಿ: ಗುಟ್ಟು ಬಿಡದ ಸಿದ್ದರಾಮಯ್ಯ
'ಪ್ರೇಮಿಗಳ ದಿನಾಚರಣೆ'ಗೆ ಅವಕಾಶವಿಲ್ಲ: ಮುತಾಲಿಕ್
ಪಬ್: ಮಂಗಳೂರಿಗೆ ಮತ್ತೊಂದು ಆಯೋಗ ಅಟ್ಟಿದ ರೇಣುಕಾ
ಯಡಿಯೂರಪ್ಪ ಪತ್ನಿ ಸಾವಿನ ಪ್ರಕರಣಕ್ಕೆ ಮರುಜೀವ