ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಯಕ್ಷ ದಿಗ್ಗಜ ಕೆರೆಮನೆ ಶಂಭುಹೆಗಡೆ ವಿಧಿವಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಕ್ಷ ದಿಗ್ಗಜ ಕೆರೆಮನೆ ಶಂಭುಹೆಗಡೆ ವಿಧಿವಶ
ಯಕ್ಷಲೋಕದ ದಿಗ್ಗಜ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕೆರೆಮನೆ ಶಂಭುಹೆಗಡೆ ಮಂಗಳವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ. ಇಡಗುಂಜಿ ಮೇಳದಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿದ್ದು, ಯಕ್ಷರಂಗದ ಮತ್ತೊಂದು ಪ್ರಮುಖ ಕೊಂಡಿ ಕಳಚಿಕೊಂಡಂತಾಗಿದೆ.

ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿ ಹೆಸರಾಗಿದ್ದ ಕೆರೆಮನೆ, ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಕೆರೆಮನೆ ಮನೆತನದವರಾಗಿದ್ದರು. ಶಂಭು ಹೆಗಡೆ ಅವರು 1934ರಲ್ಲಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಹುಟ್ಟು ಹಾಕಿದ್ದರು.

ತಮ್ಮ ವಿಶಿಷ್ಟ ವಾಗ್ಜರಿಯಿಂದ ಮನೆಮಾತಾಗಿದ್ದ ಶಂಭು ಹೆಗಡೆ, ಬಲರಾಮ, ಜರಾಸಂಧ, ದುರ್ಯೋಧನನ ಪಾತ್ರಗಳ ಮುಖೇನ ಗಮನ ಸೆಳೆದವರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೆರೆಮನೆ ಸುನಿಲ್ ಕುಮಾರ್ ದೇಸಾಯಿ ಅವರ ಪರ್ವ ಚಿತ್ರದಲ್ಲೂ ಅಭಿನಯಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೇವರಿಕ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ: ದತ್ತಾ
ಸಿದ್ದುಗೆ ಕೆಪಿಪಿಸಿ ಪಟ್ಟ ಕೊಟ್ಟರೆ,ತಕರಾರಿಲ್ಲ: ದೇಶಪಾಂಡೆ
ವಿದ್ಯಾರ್ಥಿ ವೇತನ: ಸಚಿವ
ಲಂಚ ಪ್ರಕರಣ ಆರೋಪ
ಗೌಡರ ಪತ್ರ: ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಆದೇಶ
ತುಮಕೂರು: ಡಾ.ಶಿವಕುಮಾರಶ್ರೀಗಳ ಜನ್ಮಶತಮಾನೋತ್ಸವ