ಮಂಗಳೂರಿನ ಎಮ್ಮೇಶಿಯ ಪಬ್ ಮೇಲಿನ ದಾಳಿ ಬಗ್ಗೆ ಹರಿಹಾಯ್ದಿರುವ ಕೇಂದ್ರ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್, ಪಬ್ ಸಂಸ್ಕೃತಿ ಎಂಬುದು ಭಾರತಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
ಸಂಸ್ಕೃತಿ, ಧರ್ಮದ ಹೆಸರಲ್ಲಿ ಅಹಿಂಸೆ, ಶಾಂತಿಯಿಂದ ಕೂಡಿದ ಸಹಿಷ್ಣುವಾದ ವಾತಾವರಣವನ್ನು ಹಾಳುಗೆಡವಿ, ಗೂಂಡಾಗಿರಿ ಮಾಡುವ ಮೂಲಕ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ತಪ್ಪು ಎಂದು ಕಿಡಿಕಾರಿದ್ದಾರೆ.
ನಮ್ಮದು ಶಾಂತಿ, ಸಹಿಷ್ಣುತೆಯಿಂದ ಕೂಡಿದ ಸಂಸ್ಕೃತಿ ಎಂದು ದೆಹಲಿಯಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಮಾತನಾಡುತ್ತ ಅಭಿಪ್ರಾಯವ್ಯಕ್ತಪಡಿಸಿದರು.
ಸಂಸ್ಕೃತಿಯ ರಕ್ಷಣೆಯ ಹೆಸರಲ್ಲಿ ದಾಳಿ ನಡೆಸುವ ಮೂಲಕ ಶ್ರೀರಾಮಸೇನೆ ತಪ್ಪು ಹಾದಿ ಹಿಡಿದಿದೆ. ಪಬ್‌ನಲ್ಲಿ ಯುವತಿಯರ ಮೇಲೆ ಹಲ್ಲೆ ನಡೆಸಿದ ದಾಳಿಕೋರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. |