ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿ 75ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಭುವನೇಶ್ವರಿ ಮೆರವಣಿಗೆಗೆ ಬುಧವಾರ(ಫೆ.4ರಿಂದ 7ರವರೆಗೆ) ವಿಧ್ಯುಕ್ತ ಚಾಲನೆ ದೊರೆಯಿತು. ಸಚಿವ ಗೂಳಿಹಟ್ಟಿ ಶೇಖರ್ ಅವರು ಕನ್ನಡಾಂಬೆಯ ತೆರಿಗೆ ಚಾಲನೆ ನೀಡಿದರು.
ನಾಲ್ಕು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಜಾತ್ರೆಗೆ ಅಧಿಕೃತ ಚಾಲನೆ ದೊರೆತಂತಾಗಿದೆ. ರಾಜ್ಯದ ವಿವಿಧೆಡೆಯಿಂದ ಸಹಸ್ರಾರು ಸಾಹಿತ್ಯಾಸಕ್ತರು ಈಗಾಗಲೇ ಶಿಲಾವೈಭವದ ಜಿಲ್ಲೆಗೆ ಬಂದು ಜಮಾಯಿಸಿದ್ದಾರೆ.
ವಿದ್ವಾಂಸ ಪ್ರೊ.ಎಲ್.ಬಸವರಾಜು ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಇಡೀ ಚಿತ್ರದುರ್ಗ ನವವಧುವಿನಂತೆ ಸಿಂಗರಿಸಿಕೊಂಡಿದ್ದು, ಸಾಹಿತ್ಯಾಸಕ್ತರನ್ನು ಕೈಬೀಸಿ ಕರೆಯುತ್ತಿದೆ.
ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರ ನಿಧನದಿಂದ ಸಾಹಿತ್ಯ ಸಮ್ಮೇಳನವನ್ನು ಫೆ.4ಕ್ಕೆ ಮುಂಡೂಡಲಾಗಿತ್ತು. ಸಮ್ಮೇಳನ ನಡೆಯುವ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ರಾಜಾವೀರ ಮದಕರಿ ನಾಯಕ ಮಹಾಮಂಟಪ ಮತ್ತು ತರಾಸು ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಸಿದ್ದಗೊಂಡಿದೆ. ಮಧ್ನಾಹ್ನ 3.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. |