ನೈತಿಕತೆಯನ್ನು ರಾಜ್ಯದಲ್ಲಿ ಶ್ರೀರಾಮ ಸೇನೆಯವರು ಗುತ್ತಿಗೆ ಪಡೆದಿದ್ದಾರೆಯೇ...? ಎಂದು ಮಂಗಳೂರು ಪಬ್ ದಾಳಿ ಕುರಿತು ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ಪ್ರತಿಕ್ರಿಯಿಸಿದ ರೀತಿ ಇದು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಂಸ್ಕೃತಿಯನ್ನು ಯಾರೂ ಗುತ್ತಿಗೆ ಪಡೆದಿಲ್ಲ. ತಂದೆ,ತಾಯಿಗೆ ಮಕ್ಕಳನ್ನು ಯಾವ ಸಂಸ್ಕೃತಿಯಲ್ಲಿ ಬೆಳೆಸಬೇಕು ಎಂಬ ಅರಿವಿದೆ. 18 ವರ್ಷ ವಯಸ್ಸಿನ ಯುವಕರಿಗೆ ಯಾವುದು ಸರಿ, ತಪ್ಪು ಎಂಬುದನ್ನು ನಿರ್ಧರಿಸುವ ವಿವೇಚನೆಯೂ ಇದೆ. ಹಾಗಾಗಿ ಅವರನ್ನು ದಂಡಿಸುವ ಹಕ್ಕು ನಮ್ಮ ಸಂವಿಧಾನದಲ್ಲಿ ಯಾರಿಗೂ ಕೊಟ್ಟಿಲ್ಲ ಎಂದರು.ಪಬ್ ಮೇಲಿನ ದಾಳಿಗೆ ಸರ್ಕಾರದ ಪ್ರೇರಣೆ ಇದೆಯೇ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡ ಬಯಸದ ಕೃಷ್ಣ, ಮಕ್ಕಳ ಸಂಪೂರ್ಣ ಜವಾಬ್ದಾರಿ ಪೋಷಕರದ್ದು. ಹಾಗಾಗಿ ಬೇರೆಯವರು ಸಂಸ್ಕೃತಿಯನ್ನು ಕಾಪಾಡುವ ಗುತ್ತಿಗೆದಾರರ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ. |