ನೈಸ್ ಹಗರಣದ ಕುರಿತು ರಾಜ್ಯ ಹೈಕೋರ್ಟ್‌ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪತ್ರ ಬರೆದಿರುವುದಕ್ಕೆ ಸುಪ್ರೀಂಕೋರ್ಟ್ ನ್ಯಾಯಪೀಠ ಬುಧವಾರ ಛೀಮಾರಿ ಹಾಕಿದೆ.
ನೈಸ್ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚನ್ಯಾಯಾಲಯದಲ್ಲಿ ದಾಖಲಾದ ದೂರಿನ ವಿಚಾರಣೆಯನ್ನು ನಡೆಸುತ್ತಿರುವ ಸಂದರ್ಭದಲ್ಲಿ, ನೈಸ್ ಪರ ವಕೀಲರು ದೇವೇಗೌಡರ ಪತ್ರದ ಬಗ್ಗೆ ಗಮನಸೆಳೆದಾಗ ತ್ರಿಸದಸ್ಯ ಪೀಠ ಆಕ್ರೋಶ ವ್ಯಕ್ತಪಡಿಸಿದೆ.
ಮಾಜಿ ಪ್ರಧಾನಿ ದೇವೇಗೌಡರು,ನೈಸ್ ಹಗರಣದ ವಿವಾದದ ಕುರಿತು ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಲ್ಲದೆ, ಹಗರಣದ ಕುರಿತು ಬಿಡುಗಡೆ ಮಾಡಿದ ಪುಸ್ತಕವೊಂದನ್ನು ಕಳುಹಿಸಿದ್ದರು. ಅದಕ್ಕೆ ಹೈಕೋರ್ಟ್ ಕೂಡ ಅಚ್ಚರಿ ವ್ಯಕ್ತಪಡಿಸಿ,ಏನು ಹೇಳುವುದಿದ್ದರು ಕೂಡ ನ್ಯಾಯಾಲಯಕ್ಕೆ ಖುದ್ದಾಗಿ ಬಂದು ಹೇಳಿಕೆ ನೀಡಿ ಎಂದು ನೋಟಿಸ್ ಜಾರಿ ಮಾಡಿತ್ತು.
ಇದೀಗ ನೈಸ್ ವಿವಾದ ಗೌಡರ ಪತ್ರಕ್ಕೆ ಸುಪ್ರೀಂಕೋರ್ಟ್ ತ್ರಿಸದಸ್ಯ ನ್ಯಾಯಪೀಠ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. |