ಕನ್ನಡ ನೆಲ, ಜಲ, ಭಾಷೆ ರಕ್ಷಣೆಗೆ ಸರ್ಕಾರ ಬದ್ದವಾಗಿದೆ, ಈ ವಿಷಯದಲ್ಲಿ ಯಾವುದೇ ಸಂಧಾನ ಇಲ್ಲ. ಆದರೆ ಕನ್ನಡಿಗರನ್ನು ಕೆಣಕಿ ಏನನ್ನು ಬೇಕಾದರು ಸಾಧಿಸುತ್ತೇವೆ ಎಂದು ಭಾವಿಸಿದರೆ ತಕ್ಕ ಪಾಠ ಕಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಐತಿಹಾಸಿಕ ದುರ್ಗದ ರಾಜಾ ವೀರಮದಕರಿ ನಾಯಕ ಮಹಾಮಂಟಪದಲ್ಲಿ ಬುಧವಾರ ಆರಂಭಗೊಂಡ 75ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಆದ್ಯತೆ ಕನ್ನಡಕ್ಕೆ, ಐದುವರೆ ಕೋಟಿ ಕನ್ನಡಿಗರ ಸೇವಕ ನಾನು. ನಮ್ಮನ್ನು ಕೆಣಕಿ ಏನು ಬೇಕಾದರು ಸಾಧಿಸುತ್ತೇವೆಂಬ ಹುಂಬ ಹಠ ಬೇಡ, ನಮ್ಮ ಸ್ನೇಹಶೀಲತೆಯನ್ನು ಅರ್ಥಮಾಡಿಕೊಂಡು ಸಹಕರಿಸಿ ಎಂದು ನೆರೆಯ ರಾಜ್ಯಗಳಿಗೆ ಮನವಿ ಮಾಡಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು, ಅನ್ಯ ರಾಜ್ಯಗಳ ಕನ್ನಡ ಅಧ್ಯಯನ ಪೀಠಗಳಿಗೆ ಅನುದಾನ, ಮಧುರೈ ಕಾಮರಾಜ್ ವಿ.ವಿ.ಯ ಕನ್ನಡ ವಿಭಾಗ ಮುಖ್ಯಸ್ಥರ ನೇಮಕ ಸೇರದಂತೆ ಹತ್ತು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. |