ಇಲ್ಲಿ ನಡೆಯುತ್ತಿರುವ 75 ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇಳೆ ಪುಸ್ತಕ ಮಾರಾಟಕ್ಕೆ ಸರಿಯಾದ ವ್ಯವಸ್ಥೆ ಮಾಡದಿರುವ ಬಗ್ಗೆ ಪ್ರಕಾಶಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮ್ಮೇಳನ ನಡೆಯುತ್ತಿರುವ ಸ್ಥಳದ ಸುತ್ತ ಹೆಚ್ಚಿನ ಸ್ಥಳಕ್ಕೆ ಅವಕಾಶವಿಲ್ಲ. ಇರುವ ಸ್ಥಳವನ್ನೇ ಬಳಸಿಕೊಂಡಿರುವ ಸ್ವಾಗತ ಸಮಿತಿ 500ಕ್ಕೂ ಹೆಚ್ಚು ಮಳಿಗೆಗಳ ವ್ಯವಸ್ಥೆ ಮಾಡಿದೆ.
ಬರೀ ಪುಸ್ತಕ ಮಳಿಗೆಯನ್ನೇ ರೂಪಿಸಲು ಸಾಧ್ಯವಿಲ್ಲವೆಂಬುದನ್ನು ಅರಿತುಕೊಂಡಿರುವ ಸ್ವಾಗತ ಸಮಿತಿ ತಿಂಡಿ-ತೀರ್ಥಗಳ ಮಳಿಗೆಗಳಲ್ಲೂ ಪ್ರಕಾಶಕರಿಗೆ ಅವಕಾಶ ಕಲ್ಪಿಸಿರುವುದು ಪುಸ್ತಕ ಮಾರಾಟಗಾರರ ಕೋಪಕ್ಕೆ ಕಾರಣವಾಗಿದೆ. ಬೆಂಗಳೂರು ಹಾಗೂ ಇತರೆಡೆಯಿಂದ ಬಂದ ಕೆಲ ಪ್ರಕಾಶಕರು ಮಳಿಗೆ ದೊರಕದ ಬಗ್ಗೆ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಮಳಿಗೆಗಳಲ್ಲಿಯು ಕರೆಂಟ್ ವ್ಯವಸ್ಥೆ ಇಲ್ಲ, ಕಲ್ಲಿಗಳಿಂದ ತುಂಬಿದೆ. ಮ್ಯಾಟ್ ಹಾಸಿಲ್ಲ. ಜನ ಬಂದು ಹೋಗಲು ಅವಕಾಶವಿಲ್ಲ ಎಂಬ ನೋವನ್ನು ಪ್ರಕಾಶಕರು ವ್ಯಕ್ತಪಡಿಸುತ್ತಾರೆ. ಈ ಹಿಂದೆ ನಡೆದ ಸಮ್ಮೇಳನಗಳಲ್ಲಿಯೂ ಇಂತಹ ಆಕ್ರೋಶ ವ್ಯಕ್ತವಾಗಿತ್ತು.
|