ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿ ವಿರುದ್ಧ ರಣಕಹಳೆ: ಡಿ.ಕೆ.ಶಿವಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ವಿರುದ್ಧ ರಣಕಹಳೆ: ಡಿ.ಕೆ.ಶಿವಕುಮಾರ್
ಬಿಜೆಪಿ ಕೈಗೊಂಡಿರುವ ಭಯೋತ್ಪಾದನೆ ವಿರೋಧಿ ಆಂದೋಲನ ವಿರುದ್ಧ ಕಾಂಗ್ರೆಸ್ ಪಕ್ಷ ತಾಲೂಕು ಮಟ್ಟದಲ್ಲಿ ತನ್ನ ಹೋರಾಟ ಮುಂದುವರಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದು, ಎಲ್ಲಾ ಪಕ್ಷಗಳ ಪ್ರಗತಿಪರರು, ಸಾಹಿತಿಗಳು ಬೆಂಬಲ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಯುವ ಕಾಂಗ್ರೆಸ್ ಮುಖಂಡರು, ಎನ್‌ಎಸ್‌ಯುಐ ಪದಾಧಿಕಾರಿಗಳು ವಿವಿಧ ಮಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಾಸಕರುಗಳೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಈ ಕುರಿತು ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಿಕ್ಷಣವನ್ನು ಕೇಸರೀಕರಣ ಮಾಡಲು ಹೊರಟಿರುವ ಬಿಜೆಪಿ ಭಯೋತ್ಪಾದನಾ ವಿರೋಧಿ ಆಂದೋಲನದ ವಿರುದ್ಧ ಕಾಂಗ್ರೆಸ್ ಪಕ್ಷ ತಾಲೂಕು ಮಟ್ಟದಿಂದ ಹೋರಾಟ ನಡೆಸಲಿದೆ.

ಅಭಿಯಾನದ ವಿರುದ್ಧ ಮತ್ತೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ಡಿಕೆಶಿ ತಿಳಿಸಿದರು. ಭಯೋತ್ಪಾದನೆ ವಿರೋಧಿ ಜಾಗೃತಿ ಆಂದೋಲನ ಕೈಬಿಡುವವರೆಗೆ ಪಕ್ಷ ಹೋರಾಟ ಮಾಡಲಿದೆ. ಹೋರಾಟದ ರೂಪುರೇಷೆಗಳ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶ್ರೀರಾಮಸೇನೆ ವಿರುದ್ಧ 'ಅಗ್ನಿ ಶ್ರೀಧರ್' ಪಡೆ ಸಜ್ಜು
'ಮದುವೆ ಮಾಡಿಸುವ' ಸೇನೆಗೆ ಸರಕಾರ ಎಚ್ಚರಿಕೆ
ರಾಮನಗರ: ಮೂವರ ಮೇಲೆ ಚಿರತೆ ದಾಳಿ
ಆಪರೇಶನ್ ಕಮಲ ಮುಂದುವರಿಯಲಿದೆ: ಸದಾನಂದಗೌಡ
ಬಸವರಾಜು ಹೇಳಿಕೆಗೆ ತರಳಬಾಳುಶ್ರೀ ತೀಕ್ಷ್ಣ ಪ್ರತಿಕ್ರಿಯೆ
ಪಬ್ ದಾಳಿಯ ಹಿಂದೆ ಕಾಂಗ್ರೆಸ್ ಪಿತೂರಿ: ಆಚಾರ್ಯ