ಮಾಣಿಕ್ ಚಂದ್ ಗುಟ್ಕಾ ನಿಷೇಧಕ್ಕೆ ಹೈಕೋರ್ಟ್ ಶುಕ್ರವಾರ ಒಂದು ವಾರಗಳ ಕಾಲ ತಡೆಯಾಜ್ಞೆ ನೀಡಿದೆ. ಗುಟ್ಕಾದಲ್ಲಿ ಹಾನಿಕಾರಕ ಅಂಶವಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಗುಟ್ಕಾ ಮಾಲೀಕರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ನಿಷೇಧಕ್ಕೆ ಒಂದು ವಾರಗಳ ಕಾಲ ತಡೆಯಾಜ್ಞೆ ನೀಡಿದೆ.
ಮಾಣಿಕ್ ಚಂದ್ ಗುಟ್ಕಾದಲ್ಲಿ ಮೆಗ್ನೀಷಿಯಂನಂತಹ ಹಾನಿಕಾರಕ ಅಂಶಗಳಿದ್ದಲ್ಲಿ ಅದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ವಿಭಾಗೀಯ ಪೀಠ ಆದೇಶ ನೀಡಿದೆ. ಒಂದು ವೇಳೆ ಗುಟ್ಕಾದಲ್ಲಿ ಯಾವುದೇ ಹಾನಿಕಾರಕ ಅಂಶ ಇಲ್ಲ ಎಂದು ಸರ್ಕಾರಿ ವೈದ್ಯರು ವರದಿ ನೀಡಿದ ನಂತರ ಇದರ ಉತ್ಪಾದನೆಯನ್ನು ಮುಂದುವರಿಸಬಹುದು ಎಂದು ವಿಭಾಗೀಯ ಪೀಠ ಹೇಳಿದೆ. |