ಈ ಬಾರಿ ಉಡುಪಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸೋನಿಯಾ ಪುತ್ರಿ ಪ್ರಿಯಾಂಕ ವಾದ್ರಾ ಅವರನ್ನು ಕಣಕ್ಕಿಳಿಸುವ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆದಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.ಪ್ರಿಯಾಂಕಾ ಗಾಂಧಿ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದು, ಒಂದು ವೇಳೆ ಉಡುಪಿ ಕ್ಷೇತ್ರ ಬೇಡವೆಂದರೆ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರನ್ನು ಕಣಕ್ಕಿಳಿಸಲು ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ಮುಖಂಡರು ತೀರ್ಮಾನಿಸಿದ್ದಾರೆ ಮೂಲಗಳು ತಿಳಿಸಿವೆ.ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡರಿಗೆ ಪೈಪೋಟಿ ನೀಡಲು ಇವರಿಬ್ಬರು ಸೂಕ್ತ ಎಂದು ಪಕ್ಷದ ಮುಖಂಡರು ಸೋನಿಯಾ ಅವರಿಗೆ ಮನದಟ್ಟು ಮಾಡಿದ್ದಾರೆ. ಸದ್ಯದಲ್ಲೇ ಸೋನಿಯಾ ಕೂಡಾ ಇದಕ್ಕೆ ಸಮ್ಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ನಾನು ರಾಜೀನಾಮೆ ನೀಡಿಲ್ಲ. ಈಗಲೂ ಕೆಲಸಕ್ಕೆ ಹೋಗಬಹುದು. ಆದರೆ ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಅದು ಪೊಲೀಸ್ ಇಲಾಖೆಯಾದರೂ ಸರಿ, ರಾಜಕಾರಣವಾದರೂ ಸರಿ. ಈ ಅವಕಾಶ ಯಾವ ಕ್ಷೇತ್ರದಲ್ಲಿ ಬಹುಬೇಗ ದೊರೆಯುತ್ತದೋ ಗೊತ್ತಿಲ್ಲ ಎಂದು ದಯಾನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |