ನಗರದಲ್ಲಿ ಬುಧವಾರ ರಾತ್ರಿ ಮೂವರ ಮೇಲೆ ದಾಳಿ ಮಾಡಿ ಪರಾರಿಯಾದ ಚಿರತೆ ಶುಕ್ರವಾರ ಮುಂಜಾನೆ ಮತ್ತೆ ಕಡಬಗೆರೆಯಲ್ಲಿ ಪ್ರತ್ಯಕ್ಷವಾಗಿ ಇಬ್ಬರ ಮೇಲೆ ದಾಳಿ ನಡೆಸಿದೆ.
ನೆಲಮಂಗಲ ವ್ಯಾಪ್ತಿಯ ರಾಶಿ ಅಪಾರ್ಟ್‌ಮೆಂಟ್ ಕಾವಲುಗಾರ ಶಿವರುದ್ರಯ್ಯ(45) ಹಾಗೂ ಬಾಲಕ ಸುನಿಲ್ (14) ಗಾಯಗೊಂಡಿದ್ದಾರೆ. ಇದರಿಂದಾಗಿ ಉದ್ಯಾನ ನಗರಿಯ ಜನತೆ ದಿಗಿಲುಗೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಕಡಬಗೆರೆಯ ಸುನಿಲ್ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಬಂದಾಗ ಚಿರತೆ ಆತನ ಮೇಲೆರಗಿ ಪರಾರಿಯಾಗಿತ್ತು. ಬಾಲಕನ ಬಲ ತೋಳಿನಲ್ಲಿ ಪರಚಿದ ಗಾಯಗಳಾಗಿವೆ. ನಂತರ ರಾಶಿ ಅಪಾರ್ಟ್‌ಮೆಂಟ್ ಬಳಿ ಕಾಣಿಸಿಕೊಂಡ ಚಿರತೆ ಕಾವಲುಗಾರ ಶಿವರುದ್ರಯ್ಯ ದೀಪ ಆರಿಸಲೆಂದು ಹೊರಗೆ ಬಂದಾಗ ಅವರ ಮೇಲೆ ಎರಗಿ ಅಲ್ಲಿಂದ ಪರಾರಿಯಾಗಿದೆ.
ನಗರಕ್ಕೆ ಬಂದಿರುವ ಚಿರತೆ ಮನುಷ್ಯರನ್ನೇ ಬೇಟೆಯಾಡಲು ಮುಂದಾದರೆ ಅದನ್ನು ಗುಂಡಿಟ್ಟು ಸಾಯಿಸುವುದಾಗಿ ಬೆಂಗಳೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಜಿ.ಶಿವಾನಂದಮೂರ್ತಿ ತಿಳಿಸಿದ್ದಾರೆ. |