ಚದುರಿರುವ ಜನತಾ ಪರಿವಾರದ ಮುಖಂಡರನ್ನು ಒಟ್ಟುಗೂಡಿಸಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವತ್ತ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಚಿಂತನೆ ನಡೆಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗೆ ಪರ್ಯಾಯವಾಗಿ ರಾಜ್ಯದಲ್ಲಿ ಹೊಸ ಪಕ್ಷದ ಸ್ಥಾಪನೆಯಾಗಬೇಕಾದ ಅಗತ್ಯವಿದೆ. ಜನತಾ ಪರಿವಾರದ ಬಹಳಷ್ಟು ನಾಯಕರು ತಮ್ಮ ಜೊತೆ ಬರಲು ಸಿದ್ಧರಿದ್ದಾರೆ ಎಂದರು.
ಇದೇ ತಿಂಗಳ 26ರಂದು ಹುಬ್ಬಳ್ಳಿಯಲ್ಲಿ ಬೆಂಬಲಿಗರ, ಅಭಿಮಾನಿಗಳ ಸಭೆ ಕರೆಯಲಾಗುವುದು. ಈ ಸಂದರ್ಭದಲ್ಲಿ ಹೊಸ ಪಕ್ಷದ ಕುರಿತು ಅಂತಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.
ಮಹಿಮ ಪಟೇಲ್ ಅವರಂತಹ ಯುವ ನಾಯಕರ ಅವಶ್ಯಕತೆ ಇಂದಿನ ರಾಜಕೀಯಕ್ಕಿದೆ. ಅವರು ನಮ್ಮ ಹೊಸ ಪಕ್ಷಕ್ಕೆ ನಾಯಕತ್ವ ವಹಿಸುವುದಾದರೆ ನನ್ನದೇನು ಅಭ್ಯಂತರವೇನು ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. |