ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ನಡೆಸುವುದಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಸೋಮವಾರ ಮತ್ತೊಮ್ಮೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ನೈಸ್ ವಿವಾದ ಕುರಿತಂತೆ ಮಾಜಿ ಪ್ರಧಾನಿ ದೇವೇಗೌಡರು ನ್ಯಾಯಮೂರ್ತಿಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ನೋವು ತಂದಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ.ಅಲ್ಲದೇ ನೈಸ್ ಕುರಿತ ವಿಚಾರಣೆಯನ್ನು ನಡೆಸಲು ಪಸಾಯತ್ ಅವರು ನಕಾರ ವ್ಯಕ್ತಪಡಿಸಿದರು. ಇದೊಂದು ದುರದೃಷ್ಟಕರ ಬೆಳವಣಿಗೆ ಎಂದರು.ನ್ಯಾಯಮೂರ್ತಿ ಅರಿಜಿತ್ ನಿವೃತ್ತಿಯಾಗಲು ಮೂರು ತಿಂಗಳು ಬಾಕಿ ಇರುವುದರಿಂದ ಅವರನ್ನು ಬದಲಾಯಿಸುವಂತೆ ದೇವೇಗೌಡರ ಪರ ವಕೀಲ ಶಾಂತಿಭೂಷಣ್ ಅರ್ಜಿ ಸಲ್ಲಿಸಿದ್ದುದು ಅಸಮಾಧಾನ ವ್ಯಕ್ತಪಡಿಸಲು ಕಾರಣವಾಗಿದೆ. |