ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಣಿಗಾರಿಕೆ ಆದೇಶ ಹೈಕೋರ್ಟ್‌ನಿಂದ ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣಿಗಾರಿಕೆ ಆದೇಶ ಹೈಕೋರ್ಟ್‌ನಿಂದ ವಜಾ
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಸರ್ಕಾರ ಗಣಿಗಾರಿಕೆಯ ಶಿಫಾರಸ್ಸಿನ ಬಗ್ಗೆ ಸೋಮವಾರ ಹೈಕೋರ್ಟ್ ತರಾಟೆಗೆ ತೆಗೆದುಕೊಂಡು ಆದೇಶವನ್ನು ರದ್ದು ಮಾಡಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಿಮ್ಮಪ್ಪನಗುಡಿ ವಲಯದಲ್ಲಿ 127.48 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕಬಿನಿ ಮಿನರಲ್ಸ್ ಲಿಮಿಟೆಡ್ ಕಂಪೆನಿಗೆ ನೀಡಿರುವ ಅನುಮತಿಯನ್ನು ರದ್ದು ಮಾಡಿ, ನ್ಯಾಯಮೂರ್ತಿ ಎನ್.ಕುಮಾರ್ ಆದೇಶಿಸಿದ್ದಾರೆ.

ಅನರ್ಹ ಕಂಪೆನಿಯೊಂದಕ್ಕೆ ನಿಯಮಬಾಹಿರ ಹಾಗೂ ವಿವೇಚನಾರಹಿತವಾಗಿ ಗಣಿಗಾರಿಕೆಗೆ ಅಂದಿನ ಮುಖ್ಯಮಂತ್ರಿಗಳು ಶಿಫಾರಸು ಮಾಡಿರುವ ಹಿಂದೆ ಬೇರೆಯೇ ಉದ್ದೇಶ ಅಡಗಿದೆ ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ನಿಯಮದ ಪ್ರಕಾರ ಸ್ಟೀಲ್ ಉತ್ಪಾದನೆ ಮಾಡುವವರಿಗೆ ಮಾತ್ರ ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಹುದು. ಆದರೆ ನಿಯಮವನ್ನು ಗಾಳಿಗೆ ತೂರಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರ, ತನ್ನ ಅಧಿಕಾರದ ಕೊನೆ ಕ್ಷಣದಲ್ಲಿ ಈ ಕಂಪೆನಿಗೆ ಗಣಿಗಾರಿಕೆಗೆ ಅನುಮತಿ ನೀಡಿರುವುದಾಗಿ ದೂರಿ ಸನ್ವಿಕ್ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಭಿವೃದ್ದಿ ಹಣ ವಿನಿಯೋಗಕ್ಕೆ ಪ್ರತ್ಯೇಕ ಲೆಕ್ಕ ಖಾತೆ: ಸಿಎಂ
ಸುಪ್ರೀಂ ನ್ಯಾಯಮೂರ್ತಿ ಬದಲಾವಣೆಗೆ ಗೌಡರ ಮನವಿ
ಮಾಧ್ಯಮಗಳಿಗೆ ಅಂಕುಶ ಹಾಕಲು ಚಿಂತನೆ: ಆಚಾರ್ಯ
ಲೋಕಸಭೆ: ಚುನಾವಣೆ ಉಸ್ತುವಾರಿಯಾಗಿ ನಾಯ್ಡು ಮೇಮಕ
ಹೊಸ ಪಕ್ಷ ರಚನೆ: ಸಿಂಧ್ಯಾ ಇಂಗಿತ
ರೇಣುಕಾಗೆ ಅಂಕುಶ ಹಾಕಿ: ಪ್ರಧಾನಿಗೆ ಸಿಎಂ ಆಗ್ರಹ