ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪ್ರೇಮಿಗಳಿಗೆ ರಕ್ಷಣೆ ನೀಡಿ-ಹೈಕೋರ್ಟ್‌ಗೆ ಮೊರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರೇಮಿಗಳಿಗೆ ರಕ್ಷಣೆ ನೀಡಿ-ಹೈಕೋರ್ಟ್‌ಗೆ ಮೊರೆ
ಪ್ರೇಮಿಗಳ ದಿನಾಚರಣೆಯಂದು ಅಕ್ಕ-ಪಕ್ಕ ಕುಳಿತ ಜೋಡಿಗಳು ಕಂಡು ಬಂದರೆ ಅವರಿಗೆ ತಾಳಿ ಕಟ್ಟಿ ಮದುವೆ ಮಾಡಿಸುವುದಾಗಿ ಬೆದರಿಕೆ ಹಾಕಿರುವ ಶ್ರೀರಾಮಸೇನೆಯ ಈ ವಿವಾದ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.

ಫೆ.14ರಂದು ಪ್ರೇಮಿಗಳ ದಿನ ಆಚರಿಸಿಕೊಳ್ಳುವವರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಪ್ರೇಮಿಗಳ ದಿನಾಚರಣೆಗೆ ಬೆದರಿಕೆ ಒಡ್ಡುತ್ತಿರುವ ಸಂಘಟನೆಯನ್ನು ನಿಷೇಧಿಸಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಬೆಂಗಳೂರು ಮೂಲದ ವಕೀಲರೊಬ್ಬರು ಈ ಅರ್ಜಿ ಸಲ್ಲಿಸಿದ್ದು, ಪ್ರೇಮಿಗಳ ದಿನ ಆಚರಿಸಿಕೊಳ್ಳುವ ನಾಗರಿಕರ ಹಿತರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ವ್ಯಕ್ತಿಗಳು ತಮ್ಮದೇ ಆದ ಸಂಘಟನೆ ಸ್ಥಾಪಿಸಿಕೊಂಡು ಅವರ ಭಾವನೆಗಳನ್ನು ಇತರರ ಮೇಲೆ ಬಲವಂತದಿಂದ ಹೇರುತ್ತಿದ್ದಾರೆ.

ಮಂಗಳೂರಿನಲ್ಲಿ ಸಂಘಟನೆಯೊಂದರ ಕಾರ್ಯಕರ್ತರಿಂದ ಪಬ್ ಮೇಲೆ ನಡೆದ ದಾಳಿ, ಆ ಸಂದರ್ಭದಲ್ಲಿ ಯುವತಿಯರ ಮೇಲೆ ನಡೆದ ಹಲ್ಲೆ, ಜತೆಗೆ ಕೇರಳದ ಸಚಿವರೊಬ್ಬರ ಪುತ್ರಿ ಮೇಲೆ ನಡೆದ ಹಲ್ಲೆ ಇದಕ್ಕೆ ಉದಾಹರಣೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಣಿಗಾರಿಕೆ ಆದೇಶ ಹೈಕೋರ್ಟ್‌ನಿಂದ ವಜಾ
ಅಭಿವೃದ್ದಿ ಹಣ ವಿನಿಯೋಗಕ್ಕೆ ಪ್ರತ್ಯೇಕ ಲೆಕ್ಕ ಖಾತೆ: ಸಿಎಂ
ಸುಪ್ರೀಂ ನ್ಯಾಯಮೂರ್ತಿ ಬದಲಾವಣೆಗೆ ಗೌಡರ ಮನವಿ
ಮಾಧ್ಯಮಗಳಿಗೆ ಅಂಕುಶ ಹಾಕಲು ಚಿಂತನೆ: ಆಚಾರ್ಯ
ಲೋಕಸಭೆ: ಚುನಾವಣೆ ಉಸ್ತುವಾರಿಯಾಗಿ ನಾಯ್ಡು ಮೇಮಕ
ಹೊಸ ಪಕ್ಷ ರಚನೆ: ಸಿಂಧ್ಯಾ ಇಂಗಿತ