ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮುತಾಲಿಕ್ ಗಡಿಪಾರು ಮಾಡಲು ಕಾಂಗ್ರೆಸ್ ಆಗ್ರಹ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುತಾಲಿಕ್ ಗಡಿಪಾರು ಮಾಡಲು ಕಾಂಗ್ರೆಸ್ ಆಗ್ರಹ
ಪಬ್ ಮೇಲೆ ದಾಳಿ, ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುತ್ತಿರುವ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಅವರನ್ನು ಗಡಿಪಾರು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದಲೇ ಸಂಘ-ಪರಿವಾರದವರು ಮನ ಬಂದಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಮಂಗಳೂರಿನ ಎಮ್ನೇಶಿಯ ಪಬ್ ಮೇಲಿನ ದಾಳಿಯ ನಂತರ ಪ್ರೇಮಿಗಳ ದಿನಾಚರಣೆಯಂದು ಸಿಕ್ಕಿಬಿದ್ದ ಜೋಡಿಗಳಿಗೆ ಮದುವೆ ಮಾಡಿಸುವುದಾಗಿ ಹೇಳಿರುವ ಮುತಾಲಿಕ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಆ ನೆಲೆಯಲ್ಲಿ ಮುತಾಲಿಕ್‌ರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಒಂದು ವೇಳೆ ಮುತಾಲಿಕ್ ಅವರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ ಎಂದಾದರೆ, ಗೃಹ ಸಚಿವ ವಿ.ಎಸ್.ಆಚಾರ್ಯ ಅವರೇ ಗಡಿಪಾರಾಗಲಿ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿದ್ದರಾಮಯ್ಯಗೆ ಪ್ರತಿಪಕ್ಷ ನಾಯಕ ಪಟ್ಟ ?
ಶ್ರುತಿ ಪ್ರಕರಣದಲ್ಲಿ ಸಿಪಿಎಂ ಕೈವಾಡವಿಲ್ಲ
ಕೊಲೆ ಪ್ರಕರಣ: ಶಿವಾಚಾರ್ಯ ಸ್ವಾಮೀಜಿ ಬಂಧನ
ಆರ್ಥಿಕ ಹಿಂಜರಿತ ರಕ್ಷಣಾ ವಲಯಕ್ಕೆ ಧಕ್ಕೆಯಿಲ್ಲ: ಆಂಟನಿ
ಪ್ರೇಮಿಗಳಿಗೆ ರಕ್ಷಣೆ ನೀಡಿ-ಹೈಕೋರ್ಟ್‌ಗೆ ಮೊರೆ
ಗಣಿಗಾರಿಕೆ ಆದೇಶ ಹೈಕೋರ್ಟ್‌ನಿಂದ ವಜಾ