ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿಲಿಕಾನ್ ಸಿಟಿಯಲ್ಲಿ ಏರ್ ಶೋಗೆ ಚಾಲನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಲಿಕಾನ್ ಸಿಟಿಯಲ್ಲಿ ಏರ್ ಶೋಗೆ ಚಾಲನೆ
ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಭಯೋತ್ಪಾದಕರ ಭೀತಿಯ ಕರಿನೆರಳಿನ ನಡುವೆ ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ-09ಕ್ಕೆ ಕೇಂದ್ರ ರಕ್ಷಣಾ ಸಚಿವ ಎ.ಕೆ.ಆಂಟನಿ ಚಾಲನೆ ನೀಡಿದರು.

ಏಷ್ಯಾದ ಅತೀ ದೊಡ್ಡ ಏರ್ ಶೋ‌‌ ಹಗುರ ಹೆಲಿಕಾಪ್ಟರ್ ದ್ರುವ, ಸಾರಂಗ್, ಸೂರ್ಯಕಿರಣ್ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಸರತ್ತಿಗೆ ಜನ ಮೂಕವಿಸ್ಮಿತರಾದರು. ಏರ್ ಶೋ ನೋಡಲು ಜನಸಾಗರ ತುಂಬಿದ್ದು, ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.

ಐದು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ ವಿವಿಧ ದೇಶಗಳು ಮತ್ತು ಸ್ವದೇಶದ ವೈಮಾನಿಕ ಕಂಪೆನಿಗಳು ಇಲ್ಲಿ ಭಾಗವಹಿಸಿವೆ.

ಭಾರತದ ಜತೆಗೆ ಆಸ್ಟ್ರೇಲಿಯಾ, ಅಮೆರಿಕಾ, ದಕ್ಷಿಣ ಆಫ್ರಿಕಾ, ಸ್ಟೈನ್, ಇಸ್ರೇಲ್, ಸೇರಿದಂತೆ 25 ದೇಶಗಳು ಭಾಗವಹಿಸಿವೆ. ಇದೇ ಮೊದಲ ಬಾರಿಗೆ ಜರ್ಮನಿಯೂ ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ಎಲ್ಲರಿಗೂ ಕುತೂಹಲ ಮೂಡುವಂತೆ ಮಾಡಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ.

ಬಿಗಿ ಭದ್ರತೆ:

ಉಗ್ರರ ಭೀತಿ ಎದುರಿಸುತ್ತಿರುವ ಏರೋ ಇಂಡಿಯಾ ನಡೆಯಲಿರುವ ಯಲಹಂಕ ವಾಯು ನೆಲೆಯಲ್ಲಿ ಎಲ್ಲೆಡೆ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಈ ಮಧ್ಯೆ, ಕಮಾಂಡೋ ಪಡೆ ಶಂಕಿತನೊರ್ವನನ್ನು ಬಂಧಿಸಿದ್ದು, ಆತಂಕ ಹೆಚ್ಚಾಗಿದೆ. ಪ್ರದರ್ಶನದ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಈತ ವಾಯುನೆಲೆಯೊಳಕ್ಕೆ ನುಸುಳಿದ್ದ. ಈತನ ಬಗ್ಗೆ ಇನ್ನು ವಿವರವಾದ ಮಾಹಿತಿ ಲಭ್ಯವಾಗಿಲ್ಲ. ಈತನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ: ಈಶ್ವರಪ್ಪ
ಬಿಜೆಪಿಯಲ್ಲಿ ಅಪಸ್ವರ ಇಲ್ಲ: ಅನಂತ್ ಕುಮಾರ್
ಮುತಾಲಿಕ್ ಗಡಿಪಾರು ಮಾಡಲು ಕಾಂಗ್ರೆಸ್ ಆಗ್ರಹ
ರಾಮಸೇನೆಗೆ ವ್ಯಾಲೆಂಟೈನ್ ಗಿಫ್ಟ್: ಪಿಂಕ್ ಚಡ್ಡಿ!
ಸಿದ್ದರಾಮಯ್ಯಗೆ ಪ್ರತಿಪಕ್ಷ ನಾಯಕ ಪಟ್ಟ ?
ಶ್ರುತಿ ಪ್ರಕರಣದಲ್ಲಿ ಸಿಪಿಎಂ ಕೈವಾಡವಿಲ್ಲ