ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಾಧ್ಯಮಕ್ಕೆ ಅಂಕುಶ: ಆಚಾರ್ಯ ಹೇಳಿಕೆಗೆ ಈಶ್ವರಪ್ಪ ಟೀಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಧ್ಯಮಕ್ಕೆ ಅಂಕುಶ: ಆಚಾರ್ಯ ಹೇಳಿಕೆಗೆ ಈಶ್ವರಪ್ಪ ಟೀಕೆ
ಮಾಧ್ಯಮಕ್ಕೆ ಅಂಕುಶ ಹಾಕಲು ಹೊರಟಿರುವ ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಅವರ ಹೇಳಿಕೆ ಬಗ್ಗೆ ಪಕ್ಷದಲ್ಲಿಯೇ ಅಸಮಾಧಾನ ವ್ಯಕ್ತವಾಗತೊಡಗಿದೆ.

ಅತಿರಂಜಿತ ವರದಿಗಳನ್ನು ನೀಡುತ್ತಿರುವ ಮಾಧ್ಯಮಗಳ ಮೇಲೆ ಅಂಕುಶ ಹಾಕುವ ನಿಟ್ಟಿನಲ್ಲಿ ಮಾಧ್ಯಮ ಒಂಬುಡ್ಸ್‌ಮನ್ ಜಾರಿಗೆ ತರುವ ಕುರಿತು ಹೇಳಿಕೆ ನೀಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಆಚಾರ್ಯರಿಗೆ ಅವರ ಸಹದ್ಯೋಗಿ ಸಚಿವರಾದ ಕೆ.ಎಸ್. ಈಶ್ವರಪ್ಪ ಮತ್ತು ರಾಮಚಂದ್ರಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ 40 ವರ್ಷ ರಾಜಕೀಯ ಜೀವನದಲ್ಲಿ ನಾನು ಮಾಧ್ಯಮ ವಿರುದ್ಧ ಯಾವುದೇ ಕೆಟ್ಟ ಮಾತು ಆಡಿಲ್ಲ. ಮಾಧ್ಯಮಗಳ ಟೀಕೆಯನ್ನು ಸಕಾರಾತ್ಮಕವಾಗಿಯೇ ತೆಗೆದುಕೊಂಡಿದ್ದೇನೆ. ಮಾಧ್ಯಮವನ್ನು ಹೊಣೆಯಾಗಿ ಮಾಡುವುದು ಪರಿಹಾರವಲ್ಲ ಎಂದು ಈಶ್ವರಪ್ಪ ಸಲಹೆ ನೀಡಿದ್ದಾರೆ.

ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ಬಿಜೆಪಿ ಸರ್ಕಾರದ ಪರವಾಗಿ ಈ ಸಂದರ್ಭದಲ್ಲಿ ಆಶ್ವಾಸನೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರೇಮಿಗಳ ನೆರವಿಗೆ ನಾವಿದ್ದೇವೆ: ಅಗ್ನಿ ಶ್ರೀಧರ್
ರಾಜಭವನ ಚಲೋ ಪ್ರತಿಭಟನೆ: ಕಾಂಗ್ರೆಸ್
ಚಡ್ಡಿ ಕೊಟ್ಟೋರಿಗೆ 'ಪಿಂಕ್ ಸೀರೆ' ಕೊಡುಗೆ: ಮುತಾಲಿಕ್
ಏನ್ ಕತ್ತೆ ಕಾಯುತ್ತಿದ್ದೀರಾ? ಸಿಎಂ ಕಿಡಿ
ಸಿಲಿಕಾನ್ ಸಿಟಿಯಲ್ಲಿ ಏರ್ ಶೋಗೆ ಚಾಲನೆ
ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ: ಈಶ್ವರಪ್ಪ