ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಕಲಿ ಸಿಬಿಐ ಅಧಿಕಾರಿಗಳು ಪೊಲೀಸ್ ಬಲೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕಲಿ ಸಿಬಿಐ ಅಧಿಕಾರಿಗಳು ಪೊಲೀಸ್ ಬಲೆಗೆ
ಸಿಬಿಐ ಮತ್ತು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಟ್ರಾವೆಲ್ಸ್ ಬಸ್ ಮಾಲೀಕರನ್ನು ಹಾಗೂ ಸಾರ್ವಜನಿಕರನ್ನು ವಂಚಿಸುತ್ತಿದ್ದ ಕೇರಳ ಮೂಲದ ಮೂರು ಮಂದಿಯನ್ನು ಕಲಾಸಿಪಾಳ್ಯದ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಆಳಪುಳ ಜಿಲ್ಲೆಯ ಕೆ.ಶಿವದಾಸ(48), ಜೂಬೀ ಥಾಮಸ್(25) ಬಂಧಿತ ಆರೋಪಿಗಳಾಗಿದ್ದು, ಅವರಿಂದ 1.6ಲಕ್ಷ ರೂ.ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆಯಲ್ಲದೆ ಅವರ ಹೇಳಿಕೆಯ ಮೇರೆಗೆ ಕೇರಳ ತ್ರಿಶೂರ ಜಿಲ್ಲೆಯ ಜೋನಿ(35) ಎಂಬುವನನ್ನು ಬಂಧಿಸಲಾಗಿದೆ.

ಆರೋಪಿಗಳು ಕಲಾಸಿಪಾಳ್ಯದ ಎ.ವಿ.ರಸ್ತೆಯಲ್ಲಿರುವ ಗೋಲ್ಡನ್ ಟ್ರಾವೆಲ್ಸ್ ಮ್ಯಾನೇಜರ್ ವಿ.ಜಿ.ಶಾಜಿ ಅವರಿಗೆ ಕಳೆದ ಡಿ.30ರಂದು ತಾವು ಎನ್‌ಫೋರ್ಸ್‌ಮೆಂಟ್ ಆಫೀಸರ್ ಎಂದು ಹೇಳಿ ಬೆಂಗಳೂರು ನಗರವನ್ನು ಸುತ್ತಾಡಿಸಿ ನಗದು ಸಹಿತ ಪರಾರಿಯಾಗಿದ್ದರು.

ಪಶ್ಚಿಮ ವಿಭಾಗದ ಡಿಸಿಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಎಂ.ಕೆ.ಸೊಲಭೇಶ್ವರಪ್ಪ ಮತ್ತು ಕಲಾಸಿಪಾಳ್ಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಗೋಪಾಲ ರೆಡ್ಡಿ, ಪಿಎಸ್‌ಐ ಮನೋಜ್ ಕುಮಾರ್ ನೇತೃತ್ವದ ಕಲಾಸಿಪಾಳ್ಯದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಒಂಬುಡ್ಸ್‌ಮನ್' ಮುಗಿದ ಅಧ್ಯಾಯ: ಆಚಾರ್ಯ
ರಾಜ್ಯಕ್ಕೆ ಎನ್ಎಸ್‌ಜಿ ಘಟಕ-ಆಂಟನಿ ಭರವಸೆ
ಸೀತಾರಾಮ್ ಪ್ರಕರಣ: ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್
ಮಾಧ್ಯಮಕ್ಕೆ ಅಂಕುಶ: ಆಚಾರ್ಯ ಹೇಳಿಕೆಗೆ ಈಶ್ವರಪ್ಪ ಟೀಕೆ
ಪ್ರೇಮಿಗಳ ನೆರವಿಗೆ ನಾವಿದ್ದೇವೆ: ಅಗ್ನಿ ಶ್ರೀಧರ್
ರಾಜಭವನ ಚಲೋ ಪ್ರತಿಭಟನೆ: ಕಾಂಗ್ರೆಸ್