ಶಾಲೆ-ಕಾಲೇಜುಗಳಲ್ಲಿ ನಡೆಸುತ್ತಿರುವ ಭಯೋತ್ಪಾದನಾ ವಿರೋಧಿ ಜಾಗೃತಿ ಅಭಿಯಾನದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಿದ್ದು, ಎನ್‌ಎಸ್‌ಯುಐ ಕಾರ್ಯಕರ್ತರು ಮೈಸೂರು ವಿವಿ ಕಾರ್ಯಾಲಯದೊಳಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ವಿವಿ ಕಚೇರಿಯೊಳಕ್ಕೆ ನುಗ್ಗಿದ ಎನ್‌ಎಸ್‌ಯುಐ ಗುಂಪೊಂದು ಪೀಠೋಪಕರಣ, ಫೈಲ್, ಕಂಪ್ಯೂಟರ್‌ಗಳನ್ನು ಧ್ವಂಸಗೊಳಿಸುವ ಮೂಲಕ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದೆ.
ವಿವೇಕಾನಂದ ಜಯಂತಿ ಅಂಗವಾಗಿ ಸರ್ಕಾರ ಆರಂಭಿಸಿರುವ ಭಯೋತ್ಪಾದನೆ ವಿರೋಧಿ ಜಾಗೃತಿ ಅಭಿಯಾನಕ್ಕೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ಇದಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದ ಎನ್‌ಎಸ್‌ಯುಐ ಸದಸ್ಯರು ಹಾಗೂ ಸಂಘಟಕರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಉದ್ರಿಕ್ತಗೊಂಡ ಎನ್ಎಸ್‌ಯುಐ ಕಾರ್ಯಕರ್ತರು ವಿವಿ ಕಾರ್ಯಸೌಧಕ್ಕೆ ಕಲ್ಲು ತೂರಾಟ ನಡೆಸಿದರು. |