ಪ್ರೇಮಿಗಳ ದಿನಾಚರಣೆಯಂದು ಸೆರೆಸಿಗುವ ಜೋಡಿಗಳಿಗೆ ಮದುವೆ ಮಾಡಿಸಲಾಗುವುದು ಎಂದು ಎಂದ ಶ್ರೀರಾಮಸೇನೆ ಬಳಿಕ, ಮದುವೆ ಮಾಡಿಸೊಲ್ಲ ಎಂದು ಸ್ಪಷ್ಟನೆ ನೀಡಿತ್ತು, ಆದರೆ ಇದೀಗ ಮತ್ತೆ ರಾಗಬದಲಿಸಿರುವ ಸೇನೆ, ಪ್ರೇಮಿಗಳ ಜೋಡಿ ಕಂಡರೆ ಅದೇ ಸ್ಥಳದಲ್ಲಿ ಇಬ್ಬರ ಪೋಷಕರನ್ನು ಕರೆಸಿ ಶಾಸ್ತ್ರೋಕ್ತವಾಗಿ ಹಸೆಮಣೆಗೆ ಏರಿಸಲಾಗುತ್ತದೆ ಎಂದು ಹೇಳಿದೆ.
ಶುದ್ದ ಪ್ರೇಮಕ್ಕೆ ಶ್ರೀರಾಮಸೇನೆ ಅಡ್ಡಿಪಡಿಸುವುದಿಲ್ಲ ಎಂದು ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನಿನ್ನೆ ಸ್ಪಷ್ಟನೆ ನೀಡಿದ್ದರು. ಪ್ರೇಮಿಗಳ ದಿನಾಚರಣೆಗೆ ವಿರೋಧ ಇದೆ ಎಂಬ ಪಟ್ಟನ್ನು ಸಡಿಲಿಸದ ಶ್ರೀರಾಮಸೇನೆ ಕಾನೂನುನನ್ನು ಕೈಗೆತ್ತಿಕೊಳ್ಳದೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರೇಮದ ದಿನವನ್ನು ವರ್ಷವಿಡೀ ಆಚರಿಸಿ, ಕೇವಲ ಒಂದು ದಿನದ ಆಚರಣೆಯನ್ನು ಯುವಜನತೆ ವಿರೋಧಿಸಿ ಎಂದು ಸೇನೆ ಕರೆ ನೀಡಿದೆ. ಅಲ್ಲದೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಕಾನೂನು ಕೈಗೆತ್ತಿಕೊಳ್ಳದೆ ಹಿಂದೂ ಸಂಸ್ಕೃತಿ ಉಳಿಸುವ ಪ್ರಯತ್ನವಾಗಿ ಈ ಪ್ರತಿಭಟನೆ ಮಾಡಲಾಗುತ್ತದೆ ಎಂದು ಶ್ರೀರಾಮಸೇನೆ ಹೇಳಿದೆ. |