ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕನ್ನಡ ಚಿತ್ರರಂಗ-75: ಸರ್ಕಾರದಿಂದ ನೆರವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡ ಚಿತ್ರರಂಗ-75: ಸರ್ಕಾರದಿಂದ ನೆರವು
ಕನ್ನಡ ಚಲನಚಿತ್ರ ರಂಗಕ್ಕೆ ಈಗ 75ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಚಿತ್ರರಂಗಕ್ಕೆ ವಿಶೇಷ ಕೊಡುಗೆಯನ್ನು ನೀಡುವುದಾಗಿ ಘೋಷಿಸಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಮೃತ ಮಹೋತ್ಸವ ಸಂದರ್ಭದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಮೃತ ಮಹೋತ್ಸವ ಭವನವನ್ನು ಸರ್ಕಾರವೇ ನಿರ್ಮಿಸಿಕೊಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಮಾರ್ಚ್ 1,2 ಹಾಗೂ 3ರಂದು ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವ ಕಾರ್ಯಕ್ರಮದ ಕುರಿತಂತೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕೊಡುಗೆಯನ್ನು ಪ್ರಕಟಿಸಿದರು.

ಅಮೃತ ಮಹೋತ್ಸವ ಕಾರ್ಯಕ್ರಮಕ್ಕೂ ಸೂಕ್ತ ಹಣಕಾಸು ನೆರವು ನೀಡುವುದಾಗಿಯೂ ಹೇಳಿದ ಅವರು ಅಮೃತ ಮಹೋತ್ಸವ ಭವನಕ್ಕೆ ಸೂಕ್ತ ನಿವೇಶನ ನೀಡಿ, ಅದಕ್ಕಾಗುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.

ಅಮೃತ ಮಹೋತ್ಸವ ಕಾರ್ಯವನ್ನು ವರ್ಷ ಪೂರ್ತಿ ಮಾಡಬೇಕೆಂಬ ಉದ್ದೇಶ ನಮಗಿತ್ತು. ಆದರೆ ಈ ಸಾಲಿನಲ್ಲಿ ಚಿತ್ರರಂಗ ಅಂದಾಜು 300 ಕೋಟಿ ರೂ. ನಷ್ಟ ಅನುಭವಿಸಿದೆ. ಹೀಗಾಗಿ 5 ಕೋಟಿ ರೂ.ಗಳನ್ನು ಸರ್ಕಾರ ನೀಡಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಇದಕ್ಕೆ ಸರ್ಕಾರದಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರರಂಗ ಕಟ್ಟಿ ಬೆಳೆಸಿದವರ ಕುರಿತಾಗಿನ 75 ಪುಸ್ತಕ ಹೊರತರಲಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಾಹ ನೀಡಿದ ನೆರೆ ರಾಜ್ಯದ 50 ಜನರನ್ನು ಆಹ್ವಾನಿಸಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಂಗಾರಪ್ಪ ಆಗಮನಕ್ಕೆ ಆಕ್ಷೇಪ ಇಲ್ಲ: ಮೊಯ್ಲಿ
ರೈಲ್ವೆ ಬಜೆಟ್-ರಾಜ್ಯಕ್ಕೆ ಅನ್ಯಾಯ: ಅನಂತ್ ಕುಮಾರ್
ಲೋಕಸಭೆ: ಕನ್ನಡಿಗರಿಗೆ ಟಿಕೆಟ್ ನೀಡಿ-ಕರವೇ
ಪಬ್ ದಾಳಿ ಪ್ರಕರಣ: ಐಜಿ ಪ್ರಸಾದ್ ವರ್ಗಾವಣೆ
ಪ್ರೇಮಿಗಳ ದಿನ-ಸ್ಥಳದಲ್ಲೇ ಮದುವೆ: ಶ್ರೀರಾಮಸೇನೆ
ಅಶ್ವಿನಿ ಪ್ರಕರಣ:ಆರೋಪಿ ಸಲೀಂ ನ್ಯಾಯಾಂಗ ಬಂಧನಕ್ಕೆ