ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವ ಶ್ರೀರಾಮಸೇನೆ ಕಾರ್ಯಕರ್ತರಿಗೆ ಪಿಂಕ್ ಚಡ್ಡಿ ನೀಡುವ ಅಭಿಯಾನ ಆರಂಭಿಸಿರುವ ಪತ್ರಕರ್ತೆ ನಿಶಾ ಸುಸನ್‌ಗೆ ಶ್ರೀರಾಮಸೇನೆ ಮಹಿಳಾ ಘಟಕ ದುರ್ಗಾಸೇನೆ ಶುಕ್ರವಾರ ಕೋರಿಯರ್ ಮೂಲಕ ಪಿಂಕ್ ಸೀರೆ, ಬಳೆ, ಕುಂಕುಮ ರವಾನಿಸಿದೆ.
ಸೇನೆಯ ರಾಜ್ಯ ಸಂಚಾಲಕಿ ಮಂಚಾಲೇಶ್ವರಿ ನೇತೃತ್ವದಲ್ಲಿ ಇಲ್ಲಿನ ಚನ್ನಮ್ಮ ವೃತ್ತದ ಗಣೇಶ ಮಂದಿರದಲ್ಲಿ ಪೂಜೆ ಸಲ್ಲಿಸಿ, ಸೀರೆಗಳನ್ನು ಕೇರಿಯರ್ ಮಾಡಲಾಯಿತು.
ಈ ದೇಶದಲ್ಲಿ ಹೆಣ್ಣು ಮಾನ ಉಳಿಸಿಕೊಳ್ಳಲು ಪ್ರಾಣವನ್ನೇ ತ್ಯಾಗ ಮಾಡುತ್ತಳೆ, ಆದರೆ ನೀವು ಎಲ್ಲವನ್ನೂ ಮರೆತು ಮರ್ಯಾದೆ ಕಳೆದುಕೊಳ್ಳಲು ಹಾತೊರೆಯುತ್ತಿರುವುದು ಅತ್ಯಂತ ಅಸಹ್ಯ ನಿಮಗೆ ಮಾನ ಮುಚ್ಚಿಕೊಂಡು ದೇಶದ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳಲಿ ಎಂದು ಈ ಸೀರೆ, ಬಳೆ, ಕುಂಕುಮ ಕಳುಹಿಸುತ್ತಿದ್ದೇವೆ. ಇವೆಲ್ಲವನ್ನೂ ತೊಟ್ಟು ಮೊದಲು ಭಾರತೀಯ ಮಹಿಳೆಯಾಗಿರಿ ಎಂದು ಮಂಚಾಲೇಶ್ವರಿ ನಾಯಿಕ ನಿಶಾಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. |