ಕೆಲವೊಂದು ಪ್ರಕರಣಗಳಲ್ಲಿ ತಾವೇ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸುತ್ತಿವೆ, ಹಾಗಿದ್ದೂ ಕೂಡ ನ್ಯಾಯಾಧೀಶರು ಕೆಲಸ ಮಾಡಬೇಕಾಗಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರು ಅಸಮಾಧಾನ ವ್ಯಕ್ತಪಡಿಸಿ, ಮಾಧ್ಯಮಗಳ ವೈಖರಿ ಬದಲಾಗಬೇಕಿದೆ ಎಂದರು.
ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 14ನೇ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಎರಡು ದಿನಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮಗಳು ಜನಸಾಮಾನ್ಯರಲ್ಲಿ ಕಾನೂನಿನ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಾಗಿದೆ. ಅದನ್ನು ಬಿಟ್ಟು ಹೇಳಿದ ವಿಷಯವನ್ನೇ ಪುನಃ ಪುನಃ ತೋರಿಸುವ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ವಿದ್ಯುನ್ಮಾನ ಮಾಧ್ಯಮಗಳ ಮೇಲೆ ಕಿಡಿಕಾರಿದರು.
ಅಂಚೆ ಪತ್ರ 2ದಿನದೊಳಗೆ ತಲುಪಿದರೆ ಸುದ್ದಿಯಾಗುತ್ತದೆ. ನ್ಯಾಯಾಲಯದಲ್ಲಿರುವ ಬಹಳಷ್ಟು ಪ್ರಕರಣಗಳು ಒಂದೇ ವಾರದಲ್ಲಿ ಇತ್ಯರ್ಥವಾದರೂ ಸುದ್ದಿಯಾಗುವುದಿಲ್ಲ ಎಂದು ವಿಷಾದಿಸಿದರು. |