ಅವಮಾನದಿಂದ ಆತ್ಮಹತ್ಯೆಗ ಶರಣಾದ ಕಿನ್ನಿಗೋಳಿ ಶಾಲಾ ವಿದ್ಯಾರ್ಥಿನಿ ಅಶ್ವಿನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಓಡಿ ಪೊಲೀಸರು ಶನಿವಾರ ತನಿಖೆ ಆರಂಭಿಸಿದ್ದಾರೆ.
ಸಿಓಡಿಯ ಎಸ್‌ಪಿ ಯೋಗಪ್ಪ ಅವರು ಅಶ್ವಿನಿಯ ಮರಣೋತ್ತರ ಪರೀಕ್ಷೆ ನಡೆಸಿದ ಮೂಲ್ಕಿ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಸವಿತಾ ಅವರಲ್ಲಿ ಮಾಹಿತಿ ಪಡೆದರು.
ಮತ್ತೊಂದೆಡೆ ಸಿಓಡಿ ಡಿವೈಎಸ್ಪಿ ಸೀಮಾ ಮಿಶ್ರಕೋಟಿ ಅವರ ನೇತೃತ್ವದ ಪೊಲೀಸರ ತಂಡ ಮೂಡುಬಿದಿರೆ ಠಾಣೆ ಹಾಗೂ ಆರೋಪಿ ಸಲೀಂನೊಂದಿಗೆ ಅಶ್ವಿನಿ ಸಿಕ್ಕಿಬಿದ್ದ ಮೂರೂರು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಅಲ್ಲದೇ ಸಲೀಂ, ಅಶ್ವಿನಿ ಹಾಗೂ ಆಕೆಯ ಸಹಪಾಠಿ ಪ್ರಯಾಣಿಸಿದ್ದ ವಿವಿಧ ಬಸ್ಸಿನವರನ್ನು ಕೂಡ ವಿಚಾರಣೆಗೆ ಒಳಪಡಿಸಿದ್ದಾರೆ.
ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡ ಹಿಂದಿನ ದಿನ ಜೊತೆಗಿದ್ದ ಆಕೆಯ ಸಹಪಾಠಿ ಹಾಗೂ ಈ ಪ್ರಕರಣದ ಏಕೈಕ ಸಾಕ್ಷಿ ಎನ್ನಲಾದ ಮಾಧವಿಯನ್ನು ಪೊಲೀಸರು ಅಜ್ಞಾತ ಸ್ಥಳದಲ್ಲಿ ಇರಿಸಿದ್ದಾರೆ ಎನ್ನಲಾಗಿದೆ.
ಅಶ್ವಿನಿ ಒಪ್ಪಿಗೆ ಮೇರೆಗೆ ಆಕೆಯನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದರೂ ಕೂಡ ಆಕೆ ಅಪ್ರಾಪ್ತೆ ಆಗಿರುವ ಕಾರಣ ಆರೋಪಿ ಸಲೀಂಗೆ ಪ್ರಕರಣ ಸೆರೆಮನೆ ಹಿಂದೆ ತಳ್ಳುವ ಸಾಧ್ಯತೆ ಇದೆ. |