ಕನ್ನಡ ಚಿತ್ರ ನಿರ್ಮಾಪಕರು ಸಿ.ಡಿ ಅಂಗಡಿಗಳ ಮೇಲೆ ದಾಳಿ ನಡೆಸಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಹಣ ಕಳವು ಮಾಡಿದ್ದಾರೆ ಎಂದು ಸಿ.ಡಿ ಅಂಗಡಿ ಮಾಲೀಕರು ಮೂರು ಪ್ರತ್ಯೇಕ ದೂರು ನೀಡಿದ್ದಾರೆ.
ನಗರದ ಎಸ್.ಪಿ.ರಸ್ತೆಯಲ್ಲಿರುವ ಎಸ್.ವಿ.ವಿಡಿಯೊ ಪಾರ್ಲರ್‌ನ ರಕ್ಷಿ ಮತ್ತು ವಿಡಿಯೋ ಪ್ಯಾಲೆಸ್‌ನ ಮಾಲೀಕ ಮಣಿ ಎಂಬುವವರು ನಿರ್ಮಾಪಕರ ವಿರುದ್ಧ ಸಿಲ್ವರ್ ಜ್ಯೂಬಿಲಿ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಲನಚಿತ್ರಗಳ ನಕಲಿ ಡಿವಿಡಿ, ಸಿಡಿ ಮಾರಾಟ ಮಾಡುತ್ತಿದ್ದ ಗಾಂಧೀನಗರದ ಕೆಲವು ಅಂಗಡಿಗಳ ಮೇಲೆ ಚಲನಚಿತ್ರ ನಿರ್ಮಾಪಕರೇ ಭಾನುವಾರ ದಾಳಿ ನಡೆಸಿದಾಗ ಪೊಲೀಸರ ಜೊತೆ ಮಾತಿನ ಚಕಮಕಿ ನಡೆದಿತ್ತು.
ನಿರ್ಮಾಪಕ ಕೆ. ಮಂಜು ಸೇರಿದಂತೆ ಇತರೆ ನಿರ್ಮಾಪಕರು ಗಾಂಧಿನಗರದಲ್ಲಿ ಚಲನಚಿತ್ರಗಳ ನಕಲಿ ಡಿವಿಡಿ, ಸಿಡಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗುಂಪು ಚದುರಿಸಿದ್ದರು. |