ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆರ್‌ವಿ, ಡಿಕೆಶಿ, ಸಿದ್ದುಗೆ ಹೈಕಮಾಂಡ್ ಬುಲಾವ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ವಿ, ಡಿಕೆಶಿ, ಸಿದ್ದುಗೆ ಹೈಕಮಾಂಡ್ ಬುಲಾವ್
ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳು ಸೇರಿದಂತೆ ಹಲವು ರಾಜ್ಯ ಮುಖಂಡರಿಗೆ ಪಕ್ಷದ ಹೈಕಮಾಂಡ್ ಕಡೆಯಿಂದ ಬುಲಾವ್ ಬಂದಿದ್ದು, ದೆಹಲಿಗೆ ತೆರಳಿದ್ದಾರೆ.

ಸಿದ್ದರಾಮಯ್ಯನವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಲು ಇರುವ ಅಡಚಣೆ ನಿವಾರಣೆ ಹಾಗೂ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಚರ್ಚೆಗೆ ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಬುಲಾವ್ ಬಂದಿದೆ ಎಂದು ಭಾವಿಸಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಸಭೆ ನಡೆಯಲಿದ್ದು, ಅದಕ್ಕೂ ಮುನ್ನ ಪಕ್ಷದ ವರಿಷ್ಠರು ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ ಹಾಗೂ ಅಗತ್ಯ ಬದಲಾವಣೆಗಳ ಕುರಿತು ರಾಜ್ಯ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ನಡೆಸಲಿದ್ದಾರೆ.

ಸಿದ್ದರಾಮಯ್ಯನವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡುವಲ್ಲಿ ಇರುವ ಗೊಂದಲಗಳ ನಿವಾರಣೆ ಮಾಡುವುದು, ಲೋಕಸಭೆಗೆ ಸ್ಫರ್ಧಿಸುವಂತೆ ಖರ್ಗೆಗೆ ಸೂಚನೆ ನೀಡಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಗುತ್ತದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬರುವ ಬಜೆಟ್ ಅಧಿವೇಶನ ವೇಳೆಗೆ ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿ ನೀಡಲಾಗುತ್ತದೆ ಎನ್ನಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಾಳಿ: ಚಿತ್ರ ನಿರ್ಮಾಪಕರ ವಿರುದ್ಧ ದೂರು
ನ್ಯಾಯಾಂಗ ವ್ಯವಸ್ಥೆಯ ಸಮಸ್ಯೆ: ದಿನಕರನ್ ಅಸಮಾಧಾನ
ಬಳ್ಳಾರಿ: ರೈತರ ಮೇಲೆ ಲಾಠಿ ಪ್ರಹಾರ
ಬಜೆಟ್‌‌ನಲ್ಲಿ ಅನ್ಯಾಯ: ಪ್ರಧಾನಿಗೆ ಪತ್ರ-ಯಡಿಯೂರಪ್ಪ
ಸಚಿವೆ ರೇಣುಕಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಹೆಗ್ಡೆ
ಅಶ್ವಿನಿ ಆತ್ಮಹತ್ಯೆ ಪ್ರಕರಣ:ಸಿಓಡಿ ತನಿಖೆ ಆರಂಭ