ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವೈಮಾನಿಕ ಪ್ರದರ್ಶನ: ಎಫ್-16 ಟಯರ್ ಸ್ಫೋಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೈಮಾನಿಕ ಪ್ರದರ್ಶನ: ಎಫ್-16 ಟಯರ್ ಸ್ಫೋಟ
ಏರೋ ಇಂಡಿಯಾ -09 ವೈಮಾನಿಕ ಪ್ರದರ್ಶನಕ್ಕೆ ಭಾನುವಾರ ವಿಧ್ಯುಕ್ತ ತೆರೆಕಂಡಿತು. ನಗರದ ಯಲಹಂಕ ವಾಯುನೆಲೆಯಲ್ಲಿ ಲೋಹದ ಹಕ್ಕಿಗಳ ಹಾರಾಟ ಮತ್ತು ಕಸರತ್ತು ನೋಡಲು ಸಾವಿರಾರು ಜನ ಸೇರಿದ್ದರು. ಪ್ರದರ್ಶನದ ಕೊನೆಯ ದಿನದಂದು ಎಫ್-16 ಯುದ್ಧ ವಿಮಾನದ ಟಯರ್ ಸ್ಫೋಟಗೊಂಡಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಲಾಕ್ಹೆಡ್ ಮಾರ್ಟಿನ್ ಕಂಪೆನಿಯ ಈ ಯುದ್ಧ ವಿಮಾನ ಸಾರ್ವಜನಿಕ ಪ್ರದರ್ಶನಕ್ಕೆ ಹಾರಾಟ ನಡೆಸಿ ಲ್ಯಾಂಡ್ ಆಗಿ ರನ್‌ವೇಯಲ್ಲಿ ಇಳಿದು ತನ್ನ ಸ್ಥಳದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಇದರ ಟಯರ್ ಸ್ಫೋಟವಾಗಿದೆ.

ಯುದ್ದ ವಿಮಾನಗಳಾದ ಮಿಗ್35, ಎಫ್ 18, ಎಫ್ 16, ಸೂರ್ಯಕಿರಣ, ಸುಖೋಯ್, ತೇಜಸ್, ಚೀತಾ ಹೆಲಿಕಾಪ್ಟರ್‌ಗಳು ಸೇರಿದಂತೆ ಅನೇಕ ಹಾರುವ ಯಂತ್ರಗಳು ಶಬ್ದದ ವೇಗವನ್ನು ಮೀರಿ ನಡೆಸುವ ಆಕರ್ಷಕ ಕಸರತ್ತನ್ನು ಜನತೆ ಕುತೂಹಲದಿಂದ ವೀಕ್ಷಿಸಿದರು.

ಭಯೋತ್ಪಾದಕರ ದಾಳಿಯ ಕರಿನೆರಳಿನಲ್ಲಿ ಈ ಪ್ರದರ್ಶನ ನಡೆಯಿತಾದರೂ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಭದ್ರತಾ ಸಿಬ್ಬಂದಿ ಎಚ್ಚರಿಕೆ ವಹಿಸಿದ್ದರು. ಐದು ದಿನಗಳ ಕಾಲ ನಡೆದ ಈ ಪ್ರದರ್ಶನಕ್ಕೆ ಏಳನೆಯ ಹಾಗೂ ಏಷ್ಯದ ದೊಡ್ಡ ಏರೋ ಇಂಡಿಯಾ ಪ್ರದರ್ಶನಕ್ಕೆ ಒಟ್ಟು 2 ಲಕ್ಷ ಜನರು ಭೇಟಿ ನೀಡಿದ್ದಾರೆ ಎಂಬ ಅಂದಾಜು ಇದೆ. ಎಚ್ಎಎಲ್ ರೂಪಿಸಿರುವ ಧ್ರುವ ಹೆಲಿಕಾಪ್ಟರ್‌ಗಳು ಇಲ್ಲಿಂದ ಈಕ್ವಡಾರ್ ದೇಶಕ್ಕೆ ಹಸ್ತಾಂತರ ಆಗುವುದರೊಂದಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಂಡುಕೊಳ್ಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್‌ವಿ, ಡಿಕೆಶಿ, ಸಿದ್ದುಗೆ ಹೈಕಮಾಂಡ್ ಬುಲಾವ್
ದಾಳಿ: ಚಿತ್ರ ನಿರ್ಮಾಪಕರ ವಿರುದ್ಧ ದೂರು
ನ್ಯಾಯಾಂಗ ವ್ಯವಸ್ಥೆಯ ಸಮಸ್ಯೆ: ದಿನಕರನ್ ಅಸಮಾಧಾನ
ಬಳ್ಳಾರಿ: ರೈತರ ಮೇಲೆ ಲಾಠಿ ಪ್ರಹಾರ
ಬಜೆಟ್‌‌ನಲ್ಲಿ ಅನ್ಯಾಯ: ಪ್ರಧಾನಿಗೆ ಪತ್ರ-ಯಡಿಯೂರಪ್ಪ
ಸಚಿವೆ ರೇಣುಕಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ: ಹೆಗ್ಡೆ