ದಂಪತಿ ಹಾಗೂ ಮಗನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ನಗರದಲ್ಲಿ ಕಳೆದ ತಿಂಗಳುಗಳಿಂದ ಕೊಲೆಗಳು ನಡೆಯುತ್ತಿದ್ದ ಬಗ್ಗೆ ಜನತೆ ಆತಂಕ ವ್ಯಕ್ತಪಡಿಸುತ್ತಿದ್ದ ಬೆನ್ನಲ್ಲೇ, ಇಂದು ಪಂಜಾಬ್ ಮೂಲದ ದಂಪತಿಗಳು ಸೇರಿದಂತೆ ಮಗನನ್ನೂ ಕೊಲೆಗೈದ ಘಟನೆ ಸಂಭವಿಸಿದೆ.
ಆರ್.ಟಿ.ನಗರ ನಿವಾಸಿಗಳಾದ ಸಚ್‌ದೇವ್, ರೀಟಾ ದಂಪತಿಗಳು ಹಾಗೂ ಮಗ ಮುನ್ನಾ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಸಚ್‌ದೇವ್ ಐಐಎಸ್‍ಸಿಯ ನಿವೃತ್ತ ಪ್ರಾಧ್ಯಾಪಕರು. ಮಗ ಮುನ್ನಾ ವಿಕಲಾಂಗನಾಗಿದ್ದ.
ಮಾದಕ ವ್ಯಸನಿಯಾಗಿದ್ದ ದತ್ತುಪುತ್ರ ಯಾಪಿ ಪರಾರಿಯಾಗಿದ್ದು, ಆತನೇ ಕೊಲೆಗೈದಿರಬೇಕೆಂದು ಪೊಲೀಸರು ಶಂಕಿಸಿದ್ದು, ಆತನಿಗಾಗಿ ತೀವ್ರ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. |