ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ 14 ಕುಖ್ಯಾತ ರೌಡಿಗಳನ್ನು ಸೋಮವಾರ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ.
ಜಪ್ತಿ ಮಾಡಿದ್ದ ಕಾರುಗಳನ್ನು ಅಪಹರಿಸಿ, ಭೂಗತ ಚಟುವಟಿಕೆಗೆ ಬಳಸುತ್ತಿದ್ದ ಸುಮಾರು 14 ಪ್ರಮುಖ ರೌಡಿಗಳನ್ನು ಸೆರೆಹಿಡಿದಿರುವುದಾಗಿ ಬಿದರಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ರಾಮ-ಲಕ್ಷ್ಮಣ ಗ್ಯಾಂಗ್ನ ಲಕ್ಷ್ಮಣ್, ಬುಲೆಟ್ ರವಿ, ಗಿರೀಶ್, ಬ್ರಿಗೇಡ್ ಹಾಜಮ್ ಗ್ಯಾಂಗ್ನ ಅಜರ್ ಸೇರಿದಂತೆ 14ಮಂದಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಬಂಧಿತರು 50ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಂಧಿತರಿಂದ 12ಐಶಾರಾಮಿ ಕಾರುಗಳು, ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. |