ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಇನ್ಸ್‌‌ಪೆಕ್ಟರ್‌ಗೆ ಗುಂಡಿಕ್ಕಿ ಪೇದೆ ಆತ್ಮಹತ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ಸ್‌‌ಪೆಕ್ಟರ್‌ಗೆ ಗುಂಡಿಕ್ಕಿ ಪೇದೆ ಆತ್ಮಹತ್ಯೆ
ಹಳೆಯ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣಕ್ಕಾಗಿ ಪೇದೆಯೊಬ್ಬ ಇನ್ಸ್‌‌ಪೆಕ್ಟರ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿ, ನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಇಲ್ಲಿನ ಜಾಕಿ ಕ್ವಾರ್ಟರ್ಸ್‌ನಲ್ಲಿ ನಡೆದಿದೆ.

ಇನ್ಸ್‌‌ಪೆಕ್ಟರ್ ನಾಗೇಗೌಡ (52) ಮತ್ತು ಪೇದೆ ಶಿವಕುಮಾರ್ (33) ಸಾವನ್ನಪ್ಪಿದವರಾಗಿದ್ದಾರೆ. ಪೇದೆ ಶಿವಕುಮಾರ್ ಸೋಮವಾರ ಸಂಜೆ ಇನ್ಸ್‌‌ಪೆಕ್ಟರ್ ನಾಗೇಗೌಡರ ಬಳಿ ತಾನು ರಕ್ತಕೊಟ್ಟು ಬಂದಿದ್ದೇನೆ. ವಿಶ್ರಾಂತಿ ತೆಗೆದುಕೊಳ್ಳಲು ರಜೆ ನೀಡುವಂತೆ ಕೋರಿದ ಎನ್ನಲಾಗಿದೆ. ಆದರೆ ಇನ್ಸ್‌‌ಪೆಕ್ಟರ್ ಅದನ್ನು ನಿರಾಕರಿಸಿದಾಗ ಇಬ್ಬರ ಮದ್ಯೆ ಮಾತಿನ ಚಕಮಕಿ ನಡೆದು ಶಿವಕುಮಾರ್ ತನ್ನಲ್ಲಿದ್ದ ಗುಂಡಿನಿಂದ ನಾಗೇಗೌಡರ ಮೇಲೆ ಗುಂಡು ಹಾರಿಸಿದ. 2 ಗುಂಡು ಹೊಟ್ಟೆ ಸೀಳಿಕೊಂಡು ಹೋಗಿದೆ. ಪರಿಣಾಮವಾಗಿ ಅವರು ಮೃತಪಟ್ಟಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಸುತ್ತಲಿನ ಜನ ಪೇದೆ ಶಿವಕುಮಾರ್ ಕಡೆಗೆ ಹೋಗುತ್ತಿದ್ದಂತೆ ಗಾಬರಿಗೊಂಡ ಶಿವಕುಮಾರ್ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಪೇದೆ ಶಿವಕುಮಾರ್ 3 ತಿಂಗಳ ಹಿಂದೆ ಅಶಿಸ್ತಿನ ಕಾರಣದಿಂದಾಗಿ ಅಮಾನತುಗೊಂಡಿದ್ದ. 8 ದಿನಗಳ ಹಿಂದೆಯಷ್ಟೇ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಚಿವೆ ಚೌಧುರಿ ವಿರುದ್ಧ ಮೊಕದ್ದಮೆ ದಾಖಲು
ಲೋಕಸಭೆಗೆ ಸ್ಪರ್ಧೆ ಇಲ್ಲ: ಕೃಷ್ಣ
ಸರ್ಕಾರ ಮೊಸಳೆ ಕಣ್ಣೀರು ಹಾಕುತ್ತಿದೆ: ಉಗ್ರಪ್ಪ
ಬೆಂಗಳೂರು: 14 ಕುಖ್ಯಾತ ರೌಡಿಗಳ ಬಂಧನ
ಬೆಂಗಳೂರು: ದಂಪತಿ-ಮಗನ ಬರ್ಬರ ಹತ್ಯೆ
ರೈಲ್ವೇ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ: ಒಪ್ಪಿದ ಕೃಷ್ಣ