ಕೇಂದ್ರ ಸರ್ಕಾರ ತನ್ನ ಆಡಳಿತಾವಧಿಯ 6ನೇ ಹಾಗೂ ಅಂತಿಮ ಬಜೆಟ್ ಅನ್ನು ಮಂಡಿಸಿದ್ದು, ಇದೊಂದು ಆರ್ಥಿಕ ವ್ಯವಸ್ಥೆಯ ಪುನಃಶ್ಚೇತನದ ಕ್ರಮಗಳಿಲ್ಲದ ನಿರೀಕ್ಷೆಯನ್ನು ಹುಸಿಗೊಳಿಸಿದ ಬಜೆಟ್ ಎಂದು ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಆರ್ಥಿಕ ಹಿಂಜರಿಕೆಯಿಂದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ರಫ್ತು ಉದ್ಯಮ ಕಂಗಾಲಾಗಿದೆ. ಸೇವಾ ಮತ್ತು ಉತ್ಪಾದನಾ ವಲಯಗಳಲ್ಲೂ ಬೇಡಿಕೆ ಇಲ್ಲದೆ, ಆರ್ಥಿಕ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ವ್ಯವಸ್ಥೆ ಉತ್ತೇಜಿಸುವ ಮತ್ತು ಉದ್ಯೋಗ ಸೃಷ್ಟಿಗೆ ಒತ್ತುವ ಕೊಡುವ ಯಾವುದೇ ಕಾರ್ಯಕ್ರಮ ಇಲ್ಲದಿರುವುದು ಜನಸಾಮಾನ್ಯರಿಗೆ ನಿರಾಸೆ ಮೂಡಿಸಿದೆ ಎಂದು ಹೇಳಿದರು.
ಹಣಕಾಸು ಸಚಿವರು, ಕೇವಲ ಅಂಕಿ-ಅಂಶಗಳ ಕಸರತ್ತು ಮಾಡಿದ್ದಾರೆ. ಉದ್ಯೋಗಾಂಕ್ಷಿಗಾಳು, ಯುವಜನರು, ಬಡವರು, ಮಧ್ಯಮವರ್ಗ ಮತ್ತು ಉದ್ಯಮಿಗಳು ಸೇರಿದಂತೆ ಎಲ್ಲ ವರ್ಗದ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ. |