ದೇಶವನ್ನು ಕಾಡುತ್ತಿರುವ ಬಾಹ್ಯ ಭಯೋತ್ಪಾದನೆ ಜತೆಗೆ ನಮ್ಮ ಆಂತರಿಕ ಭಯವನ್ನೂ ನಿರ್ಮೂಲನೆ ಮಾಡಬೇಕು. ಆಗ ಮಾತ್ರ ದೇಶ ಸದೃಢವಾಗುತ್ತದೆ ಎಂದು ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ ಹೇಳಿದರು.
ಭಯೋತ್ಪಾದನಾ ವಿರೋಧಿ ವಿದ್ಯಾರ್ಥಿ ಜಾಗೃತಿ ಅಭಿಯಾನದ ಸಂಕಲ್ಪ ಸಮಾವೇಶದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಭಯೋತ್ಪಾದನೆ ವಿರೋಧಿ ಹೋರಾಟ ಎಂದರೆ ಅದು ದೇಶದ ರಕ್ಷಣೆ ವಿಷಯ ಎಂದ ಸೀತಾರಾಂ, ಕೆಲ ರಾಜಕೀಯ ಪಕ್ಷಗಳು ಈ ಅಭಿಯಾನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾದನೀಯ ಎಂದರು.
ಮುಂಬಯಿ ಘಟನೆ ಇಡೀ ರಾಷ್ಟ್ರವನ್ನು ಎಚ್ಚರಿಸಿ ಜಾಗೃತರಾಗಿರುವಂತೆ ಮಾಡಿದೆ. ಇನ್ನೊಂದೆಡೆ ಇಡೀ ಶಿಕ್ಷಣ ವ್ಯವಸ್ಥೆ ನೀತಿ ಪಾಠಗಳಿಂದ ಹೊರತಾಗಿ ಹಣಗಳಿಸುವ ಏಕೈಕ ಉದ್ದೇಶವನ್ನು ಎತ್ತಿ ಹಿಡಿದಿದೆ. ಈ ಕಾಲಘಟ್ಟದಲ್ಲಿ ಬಹುತೇಕ ಮನೆ ಹಾಗೂ ಊರುಗಳು ವೃದ್ದಾಶ್ರಮಗಳಾಗಿವೆ. ಹಣ ಗಳಿಕೆ ಸ್ಪರ್ಧೆಯಲ್ಲಿ ಪ್ರೀತಿ, ಅಭಿಮಾನಗಳು ಮಾಯವಾಗಿರುವುದು ವಿಷಾದಕರ ಎಂದರು.
|