ಬೆಂಗಳೂರು ನಗರದ ಕೆರೆಗಳ ಒತ್ತುವರಿ, ಅಭಿವೃದ್ಧಿ ನಿರ್ಲಕ್ಷ್ಯ, ಅವುಗಳ ದುಸ್ಥಿತಿಗೆ ತೀವ್ರ ಕಳವಳ ವ್ಯಕ್ತಪಡಿಸಿದ ರಾಜ್ಯ ಹೈಕೋರ್ಟ್, ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಕೆರೆಗಳ ದುರಸ್ತಿ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ.
ಕೆರೆಗಳ ಖಾಸಗೀಕರಣ, ಅಭಿವೃದ್ಧಿ ನಿರ್ಲಕ್ಷ್ಯ, ಒತ್ತುವರಿ ಸಂಬಂಧಿಸಿದಂತೆ ಎನ್ವಾಯರ್‌ಮೆಂಟಲ್ ಸಪೋರ್ಟ್ ಗ್ರೂಪ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರನ್ನೊಳಗೊಂಡ ನ್ಯಾಯಪೀಠ ಕೆರೆಗಳ ದುರಸ್ತಿಗೆ ಆದೇಶ ನೀಡಿದೆ.
ಕೆರೆಗಳ ಖಾಸಗೀಕರಣ ಮಾಡಿರುವ ಬಗ್ಗೆ ಇದೇ ಸಂದರ್ಭದಲ್ಲಿ ಹೈಕೋರ್ಟ್ ಅಸಮಾಧಾನ ವಕ್ತಪಡಿಸಿದೆ. ನಗರೀಕರಣ ನೆಪದಲ್ಲಿ ಕೆರೆಗಳ ಒತ್ತುವರಿ ಮಾಡಿರುವ ಬಗ್ಗೆ ಮತ್ತು ಕೆರೆಗಳ ಅಭಿವೃದ್ದಿಗೆ ಕ್ರಮ ಕೈಗೊಂಡಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಕೆರೆಗಳ ನಿರ್ವಹಣೆಯನ್ನು ಕೆಲವೆಡೆ ಖಾಸಗಿ ಅವರಿಗೆ ನೀಡಲಾಗಿದೆ. ಪರಿಸರ, ಪ್ರಾಣಿ, ಪಕ್ಷಿಗಳಿಗೆ ಧಕ್ಕೆಯಾಗದಂತೆ ನಿರ್ವಹಣೆ ಮಾಡಬೇಕೆಂದು ಹೈಕೋರ್ಟ್ ಸೂಚಿಸಿದೆ.
|