ನಗರದ ಹೊರವಲಯವಾದ ಪೊಳಲಿ ಸಮೀಪ ಮಾಜಿ ರೌಡಿಯೊಬ್ಬನನ್ನು ಹಾಡಹಗಲೇ ಬರ್ಬರವಾಗಿ ಹತ್ಯೆಗೈದ ಘಟನೆ ಬುಧವಾರ ಬೆಳಿಗೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನಲ್ಲಿ ಆಗಮಿಸಿದ್ದ ಏಳು ಮಂದಿಯ ದುಷ್ಕರ್ಮಿಗಳ ತಂಡವೊಂದು ಪೊಳಲಿಯ ಬಡಕಬಯಲಿನಲ್ಲಿ ಮಾಜಿ ರೌಡಿ ಕ್ಯಾಂಡಲ್ ಸಂತುವನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಪೊಳಲಿಯ ಬಡಕಬಯಲಿನಲ್ಲಿ ಹಾಡಹಗಲೇ ದುಷ್ಕರ್ಮಿಗಳು ನಡೆಸಿದ ಈ ಕೃತ್ಯದಿಂದ ಸ್ಥಳೀಯರು ಆತಂತಕ್ಕೆ ಒಳಗಾಗಿದ್ದು, ಇತ್ತೀಚೆಗೆ ಮಂಗಳೂರಿನಲ್ಲಿ ದಾಳಿ, ಬೆದರಿಕೆ ಘಟನೆ ಹೆಚ್ಚುತ್ತಿರುವ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಆರೋಪಿಗಳ ಸೆರೆಗೆ ತೀವ್ರ ಶೋಧ ನಡೆಸುತ್ತಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. |