ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅನಂತಮೂರ್ತಿ 'ಸಂಸ್ಕಾರ' ಕೃತಿಗೆ ಬಹುಮಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅನಂತಮೂರ್ತಿ 'ಸಂಸ್ಕಾರ' ಕೃತಿಗೆ ಬಹುಮಾನ
PTI
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಅವರ ಅನುವಾದಗೊಂಡಿರುವ ಸಂಸ್ಕಾರ ಹಾಗೂ ಕನ್ನಡಕ್ಕೆ ಅನುವಾದಗೊಂಡಿರುವ ಅಮೃತಪ್ರೀತಂ ಅವರ ಆತ್ಮಕಥೆ ರಸೀದಿ ಟಿಕೇಟು ಕೃತಿಗೆ ಬಹುಮಾನ ಲಭಿಸಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ 2008ರ ಸಾಲಿನ ಅನುವಾದ ಬಹುಮಾನಕ್ಕಾಗಿ ಆಯ್ಕೆಯಾಗಿರುವ ವಿವಿಧ ಭಾಷೆಗಳ 16ಪುಸ್ತಕಗಳ ಪೈಕಿ ಕನ್ನಡಕ್ಕೆ ಸಂಬಂಧಿಸಿದ ಎರಡು ಕೃತಿಗಳು ಗೌರವಕ್ಕೆ ಪಾತ್ರವಾಗಿವೆ.

ಮಣಿಪುರಿ ಭಾಷೆಗೆ ಅನುವಾದಗೊಂಡಿರುವ ಯು.ಆರ್. ಅವರ ಸಂಸ್ಕಾರ ಹಾಗೂ ಕನ್ನಡಕ್ಕೆ ಅನುವಾದಗೊಂಡಿರುವ ಅಮೃತಪ್ರೀತಂ ಅವರ ಆತ್ಮಕಥೆ ರಸೀದಿ ಟಿಕೇಟು ಕೃತಿಗೆ ಬಹುಮಾನ ಬಂದಿದೆ. ರಸೀದಿ ಟಿಕೇಟ್ ಅನ್ನು ಪಂಜಾಬಿಯಿಂದ ಕನ್ನಡಕ್ಕೆ ಹಸನ್ ನಯೀಮ್ ಸುರಕೋಡ ಹಾಗೂ ಸಂಸ್ಕಾರವನ್ನು ಕನ್ನಡದಿಂದ ಮಣಿಪುರಿಗೆ ವೈ.ಇಬೊಂಚ ಸಿಂಗ್ ಅನುವಾದಿಸಿದ್ದರು.

ಬಹುಮಾನಿತ ಕೃತಿಗಳ ಅನುವಾದಕರಿಗೆ ತಲಾ ಇಪ್ಪತ್ತು ಸಾವಿರ ರೂಪಾಯಿ ಮತ್ತು ತಾಮ್ರದ ಫಲಕವನ್ನು ಆಗಸ್ಟ್‌ ತಿಂಗಳಿನಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ನೀಡಿ ಗೌರವಿಸಲಾಗುತ್ತದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಂಗಳೂರು: ಹಾಡಹಗಲೇ ಮಾಜಿ ರೌಡಿ ಹತ್ಯೆ
ಗುಲ್ಬರ್ಗಾ: ಮುತಾಲಿಕ್ ಬಿಡುಗಡೆ
ಆಪರೇಶನ್ ಕಮಲ ಪ್ರಜಾತಂತ್ರಕ್ಕೆ ಕಳಂಕ: ದೇಶಪಾಂಡೆ
ದೇವೇಗೌಡರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ
ಕೆರೆಗಳನ್ನು ದುರಸ್ತಿಪಡಿಸಿ-ಹೈಕೋರ್ಟ್ ಆದೇಶ
ಹೈಕಮಾಂಡ್ ನಿರ್ಧಾರಕ್ಕೆ ಬದ್ದ: ಖರ್ಗೆ