ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ
NRB
ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಆರೋಪ ಎದುರಿಸುತ್ತಿದ್ದ ವಿಕೃತಕಾಮಿ ಉಮೇಶ್ ರೆಡ್ಡಿಗೆ ಬುಧವಾರ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಗಲ್ಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.

ಈತ ಬಿಡುಗಡೆಯಾದರೆ ಸಮಾಜಕ್ಕೆ ಮತ್ತಷ್ಟು ಅಪಾಯ ಇದೆ ಎಂದು ಅಭಿಪ್ರಾಯಪಟ್ಟಿರುವ ಏಕಸದಸ್ಯಪೀಠದ ನ್ಯಾಯಮೂರ್ತಿಗಳಾದ ಎಸ್.ಆರ್.ಬನ್ನೂರ್‌ಮಠ ಅವರು ಮರಣದಂಡನೆಯನ್ನು ವಿಧಿಸಿದರು.

21 ಕೇಸುಗಳು ಉಮೇಶ್ ರೆಡ್ಡಿ ಮೇಲೆ ದಾಖಲಾಗಿದ್ದು, ಕೊಲೆ ಮತ್ತು ಅತ್ಯಾಚಾರ ಪ್ರಕರಣದಿಂದ ಬೆಚ್ಚಿಬೀಳಿಸಿದ್ದ ಉಮೇಶ್ ರೆಡ್ಡಿಗೆ ನಗರದ ಸೆಶನ್ಸ್ ನ್ಯಾಯಾಲಯ ಕಳೆದ ವರ್ಷ ಮರಣದಂಡನೆ ತೀರ್ಪು ನೀಡಿತ್ತು.

ಶಿಕ್ಷೆಯನ್ನು ಖಾಯಂಗೊಳಿಸುವ ಬಗ್ಗೆ ಹೈಕೋರ್ಟ್ ನಲ್ಲಿ ಭಿನ್ನ ಚಿಂತನೆಗೆಳು ಕೇಳಿಬಂದಿತ್ತು. ಸಮಾಜದ ನೆಮ್ಮದಿ ಕೆಡಿಸಿದ ದುಷ್ಟ ರೆಡ್ಡಿಗೆ ಒಂದೇ ಸಲ ಸಾವಿನ ಮುಖಾಂತರ ಶಿಕ್ಷೆ ನೀಡಿದರೆ ಸಾಲದು, ಜೀವಾವಧಿ ಶಿಕ್ಷೆ ಅನುಭವಿಸಲಿ ಎಂಬುದು ನ್ಯಾಯಮೂರ್ತಿಯೊಬ್ಬರ ಅನಿಸಿಕೆ. ಆ ಬಳಿಕ ಪ್ರಕರಣದ ಶಿಕ್ಷೆಯ ತೀರ್ಪನ್ನು ನೀಡಲು ಮೂರನೇ ನ್ಯಾಯಮೂರ್ತಿಗೆ ಒಪ್ಪಿಸಲಾಗಿತ್ತು.

21 ಅತ್ಯಾಚಾರ, ದರೋಡೆ, ಕೊಲೆ ಸೇರಿದಂತೆ ಅನೇಕ ಪ್ರಕರಣಗಳು ಈತನ ವಿರುದ್ಧ ದಾಖಲಾಗಿತ್ತು. ಒಂಟಿ ಮಹಿಳೆಯರ ಮನೆಗೆ ನುಗ್ಗಿ, ಮೊದಲು ಕೊಲೆ ಮಾಡಿ ನಂತರ ಶವ ಸಂಭೋಗ ನಡೆಸುತ್ತಿದ್ದ ವಿಕೃತಿಯನ್ನು ಉಮೇಶ್ ರೆಡ್ಡಿ ಹೊಂದಿದ್ದ. ಅನೇಕ ಸಲ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಉಮೇಶ್ ರೆಡ್ಡಿ ಪರಾರಿಯಾದ ಪ್ರಕರಣಗಳು ಈತನ ಮೇಲಿದೆ. ಉಮೇಶ್ ರೆಡ್ಡಿ ಪ್ರಕರಣ ತೀರ್ಪಿನ ಸಂದರ್ಭದಲ್ಲಿ ಹೈಕೋರ್ಟ್‌ಗೆ ಗೈರು ಹಾಜರಾಗಿದ್ದು, ಆತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿಯೇ ಇದ್ದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತಾಂತರ ನಿಷೇಧ ಕಾಯ್ದೆಯ ಅಗತ್ಯವಿದೆ: ಸುರೇಶ್ ಕುಮಾರ್
ರಾಜ್ಯ ಬಜೆಟ್‌‌ನಲ್ಲಿ ಅಭಿವೃದ್ದಿಗೆ ಆದ್ಯತೆ: ಸಿಎಂ
ಬೆಂಗಳೂರು: ಹಾಡಹಗಲೇ ಯುವಕನ ಕೊಲೆ
ಶೀಘ್ರದಲ್ಲೇ ನಿಲುವು ಪ್ರಕಟ: ಅಂಬರೀಷ್
ಅನಂತಮೂರ್ತಿ 'ಸಂಸ್ಕಾರ' ಕೃತಿಗೆ ಬಹುಮಾನ
ಮಂಗಳೂರು: ಮಾಜಿ ರೌಡಿ ಕ್ಯಾಂಡಲ್ ಸಂತು ಹತ್ಯೆ