ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕನ್ನಡ ಕಡೆಗಣನೆ: ಬಿಬಿಎಂಪಿ ವಿರುದ್ಧ ಚಂದ್ರು ಕಿಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡ ಕಡೆಗಣನೆ: ಬಿಬಿಎಂಪಿ ವಿರುದ್ಧ ಚಂದ್ರು ಕಿಡಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕನ್ನಡವನ್ನು ಕಡೆಗಣಿಸುತ್ತಿರುವ ಬಗ್ಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಧೋರಣೆ ಬದಲಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದು, ಅಗತ್ಯ ಬಿದ್ದರೆ ಕನ್ನಡಪರ ಸಂಘಟನೆಗಳೊಂದಿಗೆ ಬೀದಿಗೆ ಇಳಿಯುವುದಾಗಿ ತಿಳಿಸಿದ್ದಾರೆ.

ಸ್ವಯಂಘೋಷಿತ ಆಸ್ತಿ ತೆರಿಗೆಯ ಅರ್ಜಿ ಮತ್ತು ಮಾಹಿತಿ ಕೈಪಿಡಿಯನ್ನು ಬಿಬಿಎಂಪಿ ಅಧಿಕಾರಿಗಳು ಇಂಗ್ಲಿಷ್‌ನಲ್ಲಿ ಮುದ್ರಿಸಿರುವುದು ಚಂದ್ರು ಅವರ ಕೋಪಕ್ಕೆ ಕಾರಣವಾಗಿದೆ. ನಗರದಲ್ಲಿ ಅನ್ಯಭಾಷಿಕರು ಶೇ 68 ರಷ್ಟಿರುವುದರಿಂದ ಇಂಗ್ಲಿಷ್‌ನಲ್ಲಿಯೂ ಮುದ್ರಿಸಿಕೊಳ್ಳಲಿ. ಆದರೆ ಕನ್ನಡ ಕಡೆಗಣಿಸಿದ್ದು ತಪ್ಪು ಎನ್ನುವುದು ಅವರ ವಾದ.

ಕನ್ನಡದ ಅರ್ಜಿ ಮತ್ತು ಮಾಹಿತಿ ಕೈಪಿಡಿ ಇಲ್ಲ ಎಂಬುದು ಫೆ.9 ರಂದು ಗಮನಕ್ಕೆ ಬಂದ ತಕ್ಷಣ ಪ್ರಾಧಿಕಾರದ ಅಧ್ಯಕ್ಷರು ಬಿಬಿಎಂಪಿ ಆಯುಕ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಆಚಾತುರ್ಯದಿಂದ ಹೀಗಾಗಿದೆ. ಕನ್ನಡದಲ್ಲಿ ಮುದ್ರಿಸಿ ವಿತರಿಸುತ್ತೇವೆ ಎಂದು ಆಯುಕ್ತರು ಸಮಜಾಯಿಷಿ ನೀಡಿದ್ದಾರೆ.

ವಾರದ ಬಳಿಕವೂ ಕನ್ನಡ ಅರ್ಜಿ ಸಿಕ್ಕಿಲ್ಲ. ಸರ್ಕಾರಿ ಮುದ್ರಣಾಲಯದಲ್ಲಿ ವಿಚಾರಿಸಿದರೆ ಮುದ್ರಣವೇ ಆಗಿಲ್ಲ ಎಂಬುದನ್ನು ಚಂದ್ರು ಪತ್ತೆ ಹಚ್ಚಿದ್ದಾರೆ. ಸುಳ್ಳು ಮಾಹಿತಿ ನೀಡಿರುವುದು ಅವರನ್ನು ಕೆರಳಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಚಿವೆ ಚೌಧುರಿ ವಿರುದ್ಧ ಎಫ್‌ಐಆರ್ ದಾಖಲಿಸಿ: ಕೋರ್ಟ್
ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ
ಮತಾಂತರ ನಿಷೇಧ ಕಾಯ್ದೆಯ ಅಗತ್ಯವಿದೆ: ಸುರೇಶ್ ಕುಮಾರ್
ರಾಜ್ಯ ಬಜೆಟ್‌‌ನಲ್ಲಿ ಅಭಿವೃದ್ದಿಗೆ ಆದ್ಯತೆ: ಸಿಎಂ
ಬೆಂಗಳೂರು: ಹಾಡಹಗಲೇ ಯುವಕನ ಕೊಲೆ
ಶೀಘ್ರದಲ್ಲೇ ನಿಲುವು ಪ್ರಕಟ: ಅಂಬರೀಷ್