ಲೋಕಸಭೆ ಚುನಾವಣೆ ಘೋಷಣೆಯಾಗುವ ಹೊತ್ತಿನಲ್ಲಿ ಅಲ್ಪ ಕಾಲದ ಬಜೆಟ್ ಅಧಿವೇಶನಕ್ಕಾಗಿ ರಾಜ್ಯ ವಿಧಾನಮಂಡಲ ಗುರುವಾರ ಸಮಾವೇಶಗೊಳ್ಳಲು ಕ್ಷಣಗಣನೆ ಆರಂಭಗೊಂಡಿದ್ದು, ಮಂಗಳೂರು ಪಬ್ ಪ್ರಕರಣ, ರೈತರ ಮೇಲಿನ ಹಲ್ಲೆ ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.ಗಡಿನಾಡು ಬೆಳಗಾವಿಯಲ್ಲಿ ಇತ್ತೀಚೆಗಷ್ಟೇ ಹತ್ತು ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ಗಣಿಕಲಹದೊಂದಿಗೆ ಆರಂಭಗೊಂಡು, ಗಣಿ ಕಲಹದಲ್ಲೇ ಮುಕ್ತಾಯಗೊಂಡಿತ್ತು. ಇದೀಗ ಇಂದಿನಿಂದ ಮತ್ತೆ ಅಧಿವೇಶನ ಆರಂಭಗೊಳ್ಳಲಿದ್ದು, ಶಾಸಕ ಸಂಪಂಗಿ ಲಂಚ ಪುರಾಣ, ಭಯೋತ್ಪಾದನಾ ವಿರೋಧಿ ಅಭಿಯಾನ, ಮಂಗಳೂರು ಪಬ್ ಮೇಲಿನ ದಾಳಿಯ ವಿಷಯಗಳು ಪ್ರತಿಪಕ್ಷಗಳ ಪ್ರಮುಖ ಅಸ್ತ್ರಗಳಾಗಿದ್ದು, ಕಲಾಪದಲ್ಲಿ ಕೋಲಾಹಲ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಾಗಿದೆ.ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಮಧ್ನಾಹ್ನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿ 4ತಿಂಗಳ ಅವಧಿಗೆ ಲೇಕಾನುದಾನ ಕೇಳಲಿದ್ದಾರೆ.ತಮ್ಮ ಹಿಂದಿನ ಮೂರು ಬಜೆಟ್‌ಗಳಲ್ಲಿ ಘೋಷಿಸಿರುವ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರಿಸುವುದರ ಜತೆ ನೀರಾವರಿ, ಗ್ರಾಮೀಣಾಭಿವೃದ್ದಿ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿಗಳು ಈ ಹಿಂದೆ ಘೋಷಿಸಿದ್ದರು. |