ಇಲ್ಲಿನ ಹುಕ್ಕೇರಿ ಕೆರೆಯೊಂದರಲ್ಲಿ ಮೂರು ಸ್ಫೋಟಕ ಗುರುವಾರ ಪತ್ತೆಯಾಗಿದ್ದು, ಮತ್ತಷ್ಟು ಸ್ಫೋಟಕಗಳು ಇದ್ದಿರಬಹುದೆಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.
ಬೇಸಿಗೆಯಿಂದಾಗಿ ಕೆರೆಯ ನೀರು ಬತ್ತಿದ ಹೋದ ಪರಿಣಾಮ ಕೆರೆಯಲ್ಲಿ ಅಡಗಿಸಿಟ್ಟಿದ್ದ ಗ್ರೆನೇಡ್ ಮೇಲಕ್ಕೆ ಕಾಣಿಸಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಗ್ರೆನೇಡ್ ಲಾಕರ್ ಸಿಸ್ಟಂ ಹೊಂದಿರುವುದಾಗಿ ತಿಳಿಸಿರುವ ಪೊಲೀಸರು, ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಗ್ರೆನೇಡ್ ಬಗ್ಗೆ ಬಾಂಬ್ ನಿಷ್ಕ್ರೀಯದಳದ ತಜ್ಞರು ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. |