ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚೌಧುರಿ ವಿರುದ್ಧ ಎಫ್‌‌ಐಆರ್ ದಾಖಲಿಸಲು ಮೀನಮೇಷ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೌಧುರಿ ವಿರುದ್ಧ ಎಫ್‌‌ಐಆರ್ ದಾಖಲಿಸಲು ಮೀನಮೇಷ
PTI
ನಗರದ ಎಮ್ನೇಶಿಯ ಪಬ್ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿದ ಬಳಿಕ ಮಂಗಳೂರು ತಾಲಿಬಾನೀಕರಣಗೊಳ್ಳುತ್ತಿದೆ ಎಂದು ವಿವಾದಿತ ಹೇಳಿಕೆ ನೀಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ರೇಣುಕಾ ಚೌಧುರಿ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ಸಂಜೆಯ ತನಕವೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ಚೌಧುರಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆ?ಬೇಡವೇ?ಎಂಬ ಬಗ್ಗೆ ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚೌಧುರಿ ಅವರನ್ನು ಬಂಧಿಸಿದಲ್ಲಿ ಉದ್ಭವಿಸಬಹುದಾದ ಇತರ ಸಮಸ್ಯೆಗಳು, ಭದ್ರತೆ ಬಗ್ಗೆ ಪೊಲೀಸ್ ವಲಯದಲ್ಲಿ ಚರ್ಚೆ ನಡೆದಿದೆ. ಇನ್ನೊಂದೆಡೆ ಎಫ್‌ಐಆರ್ ದಾಖಲಿಸಿಕೊಂಡಲ್ಲಿ ಚೌಧುರಿ ಜಾಮೀನು ಪಡೆಯಬಹುದು. ಈ ಹಿನ್ನೆಲೆಯಲ್ಲಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎಫ್‌ಐಆರ್ ದಾಖಲಿಸಿ, ಬಂಧಿಸಿದರೆ ರಾಜಕೀಯ ಲಾಭ ದೊರೆಯಬಹುದು ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ತಾಲಿಬಾನೀಕರಣ ವಿವಾದಿತ ಹೇಳಿಕೆ ವಿರುದ್ಧ ಮಂಗಳೂರು ಮೇಯರ್ ಗಣೇಶ್ ಹೊಸಬೆಟ್ಟು ಸೇರಿದಂತೆ ಹಲವಾರು ಮಂದಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ 3ನೇ ಜೆಎಂಎಫ್‌ಸಿ ನ್ಯಾಯಾಲಯ ಸಚಿವೆ ಚೌಧುರಿ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಗ್ರಾಮಾಂತರ ಪೊಲೀಸರಿಗೆ ಸೂಚನೆ ನೀಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಳಪೆ ಔಷಧಿ ಪೂರೈಕೆ ಕಂಪೆನಿಗಳು ಕಪ್ಪುಪಟ್ಟಿಗೆ
ಭಕ್ತರಿಗೆ ಗಂಗಾಜಲ - ಸಿದ್ದರಾಮಯ್ಯ ಆಕ್ರೋಶ
ರಾಧಿಕಾ ಹಣದ ಮೂಲ: ಸಿಬಿಐ ತನಿಖೆಗೆ ಆಗ್ರಹ
ಹೈಕೋರ್ಟ್ ಕಲಾಪಕ್ಕೆ ಸಿಬ್ಬಂದಿ ಬಹಿಷ್ಕಾರ
ಹುಕ್ಕೇರಿಯಲ್ಲಿ ಸ್ಫೋಟಕ ಪತ್ತೆ
ಅಧಿವೇಶನ: ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ