ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆದಷ್ಟು ಬೇಗ ತಮ್ಮ ಎರಡೂ ಕಣ್ಣುಗಳನ್ನು ವೈದ್ಯರಿಗೆ ತೋರಿಸಿ, ಇಲ್ಲದಿದ್ದರೆ ಕುರುಡರಾಗಬಹುದು ಹೀಗೆಂದು ಛೇಡಿಸಿದವರು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ.
ಆಡಳಿತಾರೂಢ ರಾಜ್ಯ ಸರ್ಕಾರದ ಗೃಹ ಸಚಿವ ವಿಎಸ್ ಆಚಾರ್ಯ ಮತ್ತು ವೈದ್ಯಕೀಯ ಸಚಿವ ರಾಮಚಂದ್ರಗೌಡ ಅವರು ಮುಖ್ಯಮಂತ್ರಿಗಳ ಎರಡು ಕಣ್ಣುಗಳಿದ್ದಂತೆ. ಈ ಇಬ್ಬರೂ ಸಚಿವರ ವರ್ತನೆ ಸರಿಯಿಲ್ಲ. ಅಷ್ಟಾದರೂ ಸಚಿವರ ಬಗ್ಗೆ ಸಿಎಂ ವ್ಯಾಮೋಹ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಅವರು ತಮ್ಮ ಕಣ್ಣನ್ನು ವೈದ್ಯರಿಗೆ ತೋರಿಸಿಕೊಳ್ಳುವುದು ಒಳ್ಳೆಯದು ಎಂದು ಕಟುವಾಗಿ ಟೀಕಿಸಿದರು.
ಇಬ್ಬರೂ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಪರೋಕ್ಷವಾಗಿ ಟಾಂಗ್ ನೀಡಿದ ಖರ್ಗೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದು ಮತ್ತು ಸಚಿವ ರಾಮಚಂದ್ರ ಗೌಡ ವಿನಾ ಕಾರಣ ಕಲಾವಿದರ ಮೇಲೆ ಹರಿಹಾಯ್ದ ಘಟನೆಗಳನ್ನು ಉದ್ದೇಶಿಸಿ ಖರ್ಗೆ ಹೀಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಗೃಹ ಸಚಿವರು ಸಮಸ್ಯೆ ಹುಟ್ಟುಹಾಕಿ ಮುಖ್ಯಮಂತ್ರಿಗಳನ್ನು ತೊಂದರೆಗೆ ಸಿಲುಕಿಸುತ್ತಿದ್ದರೆ, ರಾಮಚಂದ್ರೇಗೌಡರೂ ಕೂಡ ಅದೇ ಹಾದಿ ತುಳಿಯುತ್ತಿದ್ದರೂ ಕೂಡ ಮುಖ್ಯಮಂತ್ರಿಗಳು ಕುರುಡು ವ್ಯಾಮೋಹ. ಅದ್ದರಿಂದ ಈ ಎರಡೂ ಕಣ್ಣುಗಳನ್ನು ಸರ್ಜರಿ ಮಾಡಿಸುವುದು ಸೂಕ್ತ ಎಂದು ಖರ್ಗೆ ಹೇಳಿದ್ದಾರೆ. |