ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶುಕ್ರವಾರ ವಿಧಾನಮಂಡಲದಲ್ಲಿ ಶುಕ್ರವಾರ ಬಜೆಟ್ ಮಂಡಿಸುವ ಸಂದರ್ಭದಲ್ಲಿ, 'ನನ್ನ ಕನಸಿನ ರಾಮರಾಜ್ಯದಲ್ಲಿ ಭಿಕ್ಷುಕನಿಂದ ಹಿಡಿದು ಶ್ರೀಮಂತನವರೆಗೂ ಸಮಾನ ಆದ್ಯತೆ' ಎಂಬ ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಆದರ್ಶವನ್ನು ನೆನಪಿಸಿಕೊಳ್ಳುವ ಮೂಲಕ ರಾಜ್ಯದ ಅಭಿವೃದ್ದಿಗಾಗಿ ಅವರ ಆಶಯದಂತೆ ದಿಟ್ಟ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.ಎಲ್ಲ ವರ್ಗಗಳ ಜನರ ಆಶಯಕ್ಕೆ ತಕ್ಕಂತೆ ಬಜೆಟ್ ಅನ್ನು ಮಂಡಿಸುತ್ತಿದ್ದ ಸಂದರ್ಭದಲ್ಲಿ ಯಡಿಯೂರಪ್ಪನವರು ಕೆ.ಎಸ್.ನರಸಿಂಹಸ್ವಾಮಿಯವರ ಕವನದ ಸಾಲನ್ನು ಉದಾಹರಿಸಿದರು. ಅಲ್ಲದೇ ರಾಜ್ಯದಲ್ಲಿ ಹಿಂದೂ-ಮುಸ್ಲಿಂರ ಭಾವೈಕ್ಯದ ಬಾಳ್ವೆಯ ಬೇರನ್ನು ಗಟ್ಟಿಗೊಳಿಸುವುದಾಗಿ ಹೇಳಿದ ಅವರು ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲೊಂದನ್ನು ಉಲ್ಲೇಖಿಸಿದ್ದು ವಿಶೇಷವಾಗಿತ್ತು.ಅಲ್ಲದೇ ಒಂದೇ ಜನ, ಒಂದೇ ಮನ ಎಂಬ ವರಕವಿ ದ.ರಾ.ಬೇಂದ್ರೆಯವರ ಕವನ ಸಾಲನ್ನೂ ಮುಖ್ಯಮಂತ್ರಿಗಳು ಉದಾಹರಿಸಿದರು. ಕರ್ನಾಟಕ ಜನರ ಏಳಿಗಾಗಿ ಬೇಂದ್ರೆಯವರ ಕವಿತೆಯೂ ಸ್ಫೂರ್ತಿಯಾಗಿದೆ ಎಂದರು.ಪ್ರಥಮ ಬಾರಿಗೆ ಕನ್ನಡದಲ್ಲೇ ಮುದ್ರಿತವಾದ ಬಜೆಟ್ ಪ್ರತಿ:ಈ ವರ್ಷದ ಬಜೆಟ್ ಪ್ರತಿಯನ್ನು ಕನ್ನಡದಲ್ಲಿ ಮುದ್ರಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಕನ್ನಡತನ ಮೆರೆದಿದೆ.ಪ್ರತಿ ವರ್ಷವು ಬಜೆಟ್ ಪ್ರತಿಯನ್ನು ಇಂಗ್ಲಿಷ್‌ನಲ್ಲಿ ಮುದ್ರಿಸಿ ನಂತರ ಕನ್ನಡದಲ್ಲಿ ತರ್ಜುಮೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಬಜೆಟ್ ಕನ್ನಡದಲ್ಲಿಯೇ ಮುದ್ರಿಸಿ ಕನ್ನಡದ ಬಗ್ಗೆ ಸರ್ಕಾರಕ್ಕಿರುವ ಕಾಳಜಿ ತೋರ್ಪಡಿಸಿದೆ.ಬಜೆಟ್‌ನ ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ |